ರಸ್ತೆಯಲ್ಲಿ ಬಿದ್ದು ಸಿಕ್ಕಿದ ಮೊಬೈಲ್ ಫೋನನ್ನು ಹಿಂತಿರುಗಿಸಿ ಪ್ರಾಮಾಣಿಕತೆ

0

 

ರಸ್ತೆಯಲ್ಲಿ ಬಿದ್ದು ಸಿಕ್ಕಿದ ಮೊಬೈಲ್ ಫೋನನ್ನು ಹಿಂತಿರುಗಿಸಿ ಇಲೆಕ್ರ್ಟೀಷಿಯನ್ ಉದ್ಯೋಗಿಯೊಬ್ಬರು  ಪ್ರಾಮಾಣಿಕತೆ ಮೆರೆದಿದ್ದಾರೆ.

 

ಕೊಡಿಯಾಲಬೈಲು ಸರ್ಕಾರಿ ಶಾಲಾ ಶಿಕ್ಷಕಿ ಸವಿತಾ ಸುಬ್ಬಯ್ಯ ಇವರ ಶಾಲಾ ದಾಖಲೆಗಳನ್ನು ಹೊಂದಿರುವ ಮೊಬೈಲ್ ಫೋನ್ ಶ್ರೀರಾಮ್ ಪೇಟೆಯಲ್ಲಿ ಕಳೆದುಹೋಗಿತ್ತು.
ಕಳೆದು ಹೋಗಿದ್ದ ಮೊಬೈಲ್ ಫೋನ್ ಶ್ರೀರಾಮ್ ಪೇಟೆ ರಸ್ತೆ ಬದಿಯಲ್ಲಿ ಜಾಲಸೂರು ಗ್ರಾಮದ ಅರ್ಬಡ್ಕ ಮನೆ ಜಯಚಂದ್ರ ನಾಯ್ಕ್ ಎಂಬುವರಿಗೆ ಸಿಕ್ಕಿದ್ದು ಅವರು ತಮ್ಮ ಪರಿಚಯಸ್ತರ ಸಹಕಾರದಿಂದ ಮೊಬೈಲ್ ಕಳೆದುಕೊಂಡಿದ್ದ ಶಿಕ್ಷಕಿಯ ಮಾಹಿತಿ ಪಡೆದು ಫೋನನ್ನು ಅವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಅನ್ನ ಪೂರ್ಣ ಎಲೆಕ್ಟ್ರಿಕಲ್ ನ ಉದ್ಯೋಗಿಯಾಗಿರುವ ಇವರು ಚಂದ್ರಹಾಸ ಕಮಿಲಡ್ಕ, ಶಿವಾನಂದ ಕಮೀಲಡ್ಕ, ರಮೇಶ್ ಕೊಡೆಂಕೆರಿ, ಅಜಿತ್ ಕೊಡಿಯಾಲಬೈಲು ಜಯಚಂದ್ರ ನಾಯ್ಕ್ ರವರ ಸಹಕಾರವನ್ನು ಪಡೆದು ಶಿಕ್ಷಕೀಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.