ಎಲಿಮಲೆಯಲ್ಲಿ ಮೈತ್ರೇಯ ಕ್ಲಿನಿಕ್ ಶುಭಾರಂಭ

0

 

ಎಲಿಮಲೆಯ ಪ್ರಸನ್ನ ಕಾಂಪ್ಲೆಕ್ಸ್ ನಲ್ಲಿ ಡಾ| ಚೈತ್ರಭಾನು ಕೆ.ಎಸ್.ರವರ ಮ್ಹಾಲಕತ್ವದ ಮೈತ್ರೇಯ ಕ್ಲಿನಿಕ್ ಇಂದು ಉದ್ಘಾಟನೆಗೊಂಡಿತು. ಸುಳ್ಯ ತಾಲೂಕು ಆರೋಗ್ಯಧಿಕಾರಿ ಡಾ. ನಂದಕುಮಾರ್ ಬಾಳಿಕಲ ಕ್ಲಿನಿಕ್‌ನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕ ವಾಸುದೇವ ಗೌಡ ಪಡ್ಪು, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ, ದೇವಚಳ್ಳ ಗ್ರಾ.ಪಂ. ಅಧ್ಯಕ್ಷೆ ಸುಲೋಚನಾ ದೇವ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಶುಭ ಹಾರೈಸಿದರು. ವೈದ್ಯೆ ಡಾ.ಚೈತ್ರಭಾನು, ಚೈತ್ರ ಭಾನುರವರ ತಂದೆ    ಶೇಷಪ್ಪ ಗೌಡ  ಕೋಲ್ಪೆ   ಮತ್ತು ಮಾವ ಲಿಂಗಪ್ಪ ಗೌಡ ಪಡ್ಪುರವರು ವೇದಿಕೆಯಲ್ಲಿದ್ದರು.
ದೇವಚಳ್ಳ ಗ್ರಾ.ಪಂ. ಸದಸ್ಯ ಶೈಲೇಶ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.‌ ಚೈತ್ರಭಾನುರವರ ಪತಿ ವಿವೇಕ್ ರವರು ವಂದಿಸಿದರು.