ಅರಂತೋಡು : ಮಹರ್ಷಿ ಮಡ್ ಬ್ಲಾಕ್ಸ್ ಇಂಡಸ್ಟ್ರೀಸ್ ಶುಭಾರಂಭ

0

 

 

ಅರಂತೋಡಿನ ಕುಲ್ಚಾರು ರಸ್ತೆ ಸಮೀಪ ಧನುಷ್ ಕಜೆಗದ್ದೆ ಮತ್ತು ವೈಭವ್ ಕಜೆಗದ್ದೆ ಅವರ ಮಾಲಕತ್ವದ ಮಹರ್ಷಿ ಮಡ್ ಬ್ಲಾಕ್ಸ್ ಇಂಡಸ್ಟ್ರೀಸ್ ಸೆ. 30 ರಂದು ಉದ್ಘಾಟನೆಗೊಂಡಿತು.


ಪದ್ಮಶ್ರೀ ಪುರಸ್ಕೃತ ಡಾ। ಗಿರೀಶ್ ಭಾರದ್ವಾಜ್ ನೂತನ ಇಂಡಸ್ಟ್ರೀಸ್ ಅನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಉಪಾಧ್ಯಕ್ಷ ರವಿ ಪೂಜಾರಿ,ಚಿಕ್ಕಮಗಳೂರಿನ ಚಿರಾಗ್ ಇಂಡಸ್ಟ್ರೀಸ್ ಸಂಸ್ಥಾಪಕ ಲಕ್ಷ್ಮಿನಾರಾಯಣ ಕುತ್ತಮೊಟ್ಟೆ , ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸುಳ್ಯ ಇಂಜಿನಿಯರ್ ಎಸೋಸಿಯೇಶನ್ ಅಧ್ಯಕ್ಷ ಪ್ರಸಾದ್ ಎಂ.ಎಸ್, ಖಜಾಂಜಿ ಶಾಂಪ್ರಸಾದ್ ಅಡ್ಡಂತಡ್ಕ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಭಗವತಿ ಹಾರ್ಡ್ ವೇರ್ ಮತ್ತು ಇಂಡಸ್ಟ್ರೀಸ್ ಮಾಲಕ ರಮೇಶ್ ಶೆಟ್ಟಿ, ಸ್ವಸ್ತಿಕ್ ವೈನ್ಸ್ ನ ಲೋಕೇಶ್ ಪೂಜಾರಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಬಾಲಕೃಷ್ಣ ಗೌಡ ಕಜೆಗದ್ದೆ, ರಾಮಚಂದ್ರ ಗೌಡ ಕಜೆಗದ್ದೆ ಇದ್ದರು.

ಸಂಸ್ಥೆ ಪಾಲುದಾರ ವೈಭವ್ ಕಜೆಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹೇಮಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here