ಅ. 4 : ಮುರುಳ್ಯ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಆಯುಧ ಪೂಜೆ

0

ಮುರುಳ್ಯ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಮಹಾನವಮಿಯಂದು ಮತ್ತು ವಿಜಯದಶಮಿಯಂದು ಆಯುಧ ಪೂಜೆ, ರಂಗಪೂಜೆ, ಅಕ್ಷರಾಭ್ಯಾಸ, ತೆನೆಹಬ್ಬ ಮತ್ತು ಭೋಜನ ನಡೆಯಲಿರುವುದು. ಅ. 4ರಂದು ಬೆಳಿಗ್ಗೆ ಆಯುಧ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಬಳಿಕ ಶ್ರೀ ದೇವರಿಗೆ ರಂಗಪೂಜೆ , ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿರುವುದು. ಅಕ್ಟೋಬರ್ 5ರಂದು ಬೆಳಿಗ್ಗೆ ಆಯುಧಪೂಜೆ ಅಕ್ಷರಾಭ್ಯಾಸ, ತೆನೆ ಹಬ್ಬ, ತೆನೆ ವಿತರಣೆ ಮಧ್ಯಾಹ್ನ ನವಾನ್ನ ಭೋಜನ ನಡೆಯಲಿರುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.