ಕೆ.ಎಸ್.ಆರ್.ಟಿ.ಸಿ ಸಂಚಾರ ನಿಯಂತ್ರಕ ಗೋಪಾಲಕೃಷ್ಣ ದೇವಸ್ಯರಿಗೆ ಬೀಳ್ಕೊಡುಗೆ

0

 

 

ಕಳೆದ 33 ವರ್ಷಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನಿರ್ವಾಹಕರಾಗಿ ಬಳಿಕ ಪದೋನ್ನತಿ ಪಡೆದು ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿದ್ದು ಸೇವೆಯಿಂದ ಸೆ.30 ರಂದು ನಿವೃತ್ತಿಯಾದ ಕಡಬ ತಾಲೂಕಿನ ಎಡಮಂಗಲ ದೇವಸ್ಯ ಗೋಪಾಲಕೃಷ್ಣರವರಿಗೆ ಬೀಳ್ಕೊಡುಗೆ ಸಮಾರಂಭವು ಸುಳ್ಯ ಡಿಪೋದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕ ಶ್ರೀಮತಿ ಸತ್ಯಲತಾ, ಸಂಚಾರ ನಿರೀಕ್ಷಕ ಪದ್ಮನಾಥನ್, ಸಹಾಯಕ ಕಾರ್ಯ ಅಧೀಕ್ಷಕ ಮಹಮ್ಮದ್ ಆಲಿ, ಭದ್ರತಾ ರಕ್ಷಕಾ ಜಗನ್ನಾಥ್, ಸಂಚಾರ ನಿಯಂತ್ರಕರಾದ ಶಾಂತಪ್ಪ, ಕುಶಾಲಪ್ಪ, ಮೋನಪ್ಪ, ವೇಣುಗೋಪಾಲ್, ಶಿವಪ್ಪ, ನಾಗರಾಜ್, ಪಾರುಪತ್ತೆದಾರ ಹರೀಶ್, ಮೆಕ್ಯಾನಿಕ್ ಮೋನಪ್ಪ ಗೌಡ ಗೆಜ್ಜೆ, ಲೋಕೇಶ್, ಗೋಪಾಲಕೃಷ್ಣ, ಎಸ್.ಕುಮಾರ್, ದಯಾನಂದ, ಲಕ್ಷ್ಮೀಶ್, ಗುರುಪ್ರಸಾದ್, ತೀರ್ಥರಾಮ, ಸುಧೀರ್ ಕೃಷ್ಣ, ಕಿಶೋರ್ ಕುಮಾರ್, ಜಯಪ್ರಕಾಶ್, ಸಗಾಯಿನಾಧನ್, ರಂಜಿತ್, ವಿನಯ್, ಗೋಪಾಲ್ ಈಶ್ವರಡ್ಕ ಮೊದಲಾದವರು ಉಪಸ್ಥಿತರಿದ್ದರು.