ಮುರುಳ್ಯ : ಜೀವ ಭದ್ರತಾ ವಿಮೆಯ ಮೊತ್ತ ವಿತರಣೆ ಮತ್ತು ಸಾಲ ಮನ್ನಾ

0

 

 

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯದ ನಿಂತಿಕಲ್ಲು ವಲಯದ ಮುರುಳ್ಯ ಮಾತೃಶ್ರೀ ಸಂಘದ ಸದಸ್ಯೆ ಭಾಗೀರಥಿಯವರ ಪತಿ ರಾಜು ನಿಧನರಾಗಿದ್ದು, ಭಾಗೀರಥಿಯವರ 1,88,000 ರೂ. ಸಾಲವನ್ನು ಮನ್ನಾ ಮಾಡಲಾಯಿತು.
ವಾರದ ಕಲೆಕ್ಷನ್ ಸೆಂಟರ್ ನಲ್ಲಿ ಸೆಪ್ಟೆಂಬರ್ ಸೆ. 28ರಂದು ಮುರುಳ್ಯ ಒಕ್ಕೂಟದ ಅಧ್ಯಕ್ಷ ಪದ್ಮನಾಭ ಪೂದೆಯವರು ಜೀವ ಭದ್ರತಾ ಮೊತ್ತ 22,359 ರೂ ಅನ್ನು ನಗದಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ನಿಕಟಪೂರ್ವಾಧ್ಯಕ್ಷ ವಸಂತ ಹೆಚ್. ಒಕ್ಕೂಟದ ಪದಾಧಿಕಾರಿಗಳು, ಕಾರ್ಯದರ್ಶಿ ಗೀತಾ ಕಳತ್ತಜೆ, ಮಾತೃಶ್ರೀ ಸಂಘದ ಸದಸ್ಯರು, ನಗದು ಸಂಗ್ರಹಗಾರ ಕೃಷ್ಣಪ್ಪ, ಸಹಾಯಕಿ ರಂಧಿಕ‍ಾ ಸತೀಶ್ ರೈ, ಸೇವಾ ಪ್ರತಿನಿಧಿ ಶ್ರೀಮತಿ ಶಶಿಕಲಾ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here