ನಿಂತಿಕಲ್ಲು: ಕೆ.ಎಸ್ ಗೌಡ ಪಿ.ಯು. ಕಾಲೇಜಿನಲ್ಲಿ ಪಾರಂಪರಿಕ ದಿನಾಚರಣೆ ನಮ್ಮ ಪರಂಪರೆ ನಮ್ಮ ದಿನ – 2022

0

 

 

ನಿಂತಿಕಲ್ಲಿನ ಕೆ.ಎಸ್ ಗೌಡ ಸಮೂಹ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ “ನಮ್ಮ ಸಂಸ್ಕೃತಿ ನಮ್ಮ ದಿನ -2022” ನ್ನು ಸೆ. 30ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಪದವಿ ಪೂರ್ವ ಕಾಲೇಜಿನ ವಯೋ ಹಿರಿಯ ಉದ್ಯೋಗಿ ವಿಮಲಾ ಎ ದೀಪ ಬೆಳಗಿಸಿ ಉದ್ಘಾಟಿಸಿದರು.

 

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಅನುರಾಧ ಕುರುಂಜಿ ಭಾಗವಹಿಸಿ ಭಾರತೀಯ ಸಂಸ್ಕೃತಿ ಮತ್ತು ಅದನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಾಂಪ್ರದಾಯಿಕ ಬಿಳಿ ಪಂಚೆ ಹಾಗೂ ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರು ಸೀರೆಯುಟ್ಟು ಆಗಮಿಸಿದರು. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸ್ಪರ್ಧೆಗಳನ್ನು ನಡೆಸಲಾಯಿತು. ಐ.ಟಿ.ಐ ಉಪನ್ಯಾಸಕರಾದ ಶೇಖರ್ ಕುದ್ಪಾಜೆ, ಪ್ರಸನ್ನ ವೈ.ಟಿ ಹಾಗೂ ಶಿಕ್ಷಕಿಯರಾದ ವೇದಾವತಿ ಎಸ್, ವಿಶಾಲಾಕ್ಷಿ, ಶಿಕ್ಷಕ ಅಜಿತ್ ಐವರ್ನಾಡು ತೀರ್ಪುಗಾರರಾಗಿ ಸಹಕರಿಸಿದರು. ಅತಿಥಿಗಳಾಗಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಚಿದಾನಂದ ಕಲ್ಲೇರಿ, ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ರೈ ಪಾದೆಕಲ್ಲು, ಪ್ರೌಢಶಾಲಾ ಮುಖ್ಯ ಗುರುಗಳಾದ ಉಮೇಶ್ ಗೌಡ ಎಚ್ ಭಾಗವಹಿಸಿದ್ದರು. ಭಾರತೀಯ ಸಂಪ್ರದಾಯದಂತೆ ಬಾಳೆ ಎಲೆಯ ಸಹಭೋಜನ ಏರ್ಪಡಿಸಲಾಗಿತ್ತು.
ವಿದ್ಯಾರ್ಥಿನಿಯರ ಪ್ರಾರ್ಥಸಿದರು. ಉಪನ್ಯಾಸಕ ಉಜ್ವಲ್ ಕೆ.ಎಚ್ ಮತ್ತು ಜೀವನ್ ಎಸ್ ಎಚ್ ನಿರೂಪಿಸಿದರು. ಉಪನ್ಯಾಸಕಿ ಪ್ರಿಯಾ ಎಂ ಸ್ವಾಗತಿಸಿದರು. ಉಪನ್ಯಾಸಕಿ ಧನ್ಯ ಕೆ.ವಿ ವಂದಿಸಿದರು. ಉಪನ್ಯಾಸಕಿ ನಿಶಾ ಬಿ.ಎಸ್ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಉಪನ್ಯಾಸಕಿ ಜಯಶ್ರೀ ಪಿ.ವಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಛೇರಿ ಸಿಬ್ಬಂದಿ ಪ್ರಮೀಳಾ ಕೆ ಸಹಕರಿಸಿದರು.