ಎಲ್ಐಸಿಯಲ್ಲಿ ವಾಸುದೇವ ಮೇಲ್ಪಾಡಿ ಯವರುMDRT ಸಾಧನೆ

0
179

 

 

ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಮುಖ್ಯ ಶಾಖೆಯ ಪ್ರತಿನಿಧಿ ಚೆಯರ್ ಮೆನ್ ಕ್ಲಬ್ ಸದಸ್ಯರಾಗಿರುವ ವಾಸುದೇವ ಮೇಲ್ಪಾಡಿ ರವರು 2022ನೇ ಸಾಲಿನಲ್ಲಿ ಉತ್ತಮ ವಿಮಾ ವ್ಯವಹಾರ ಮಾಡಿ ಶಾಖೆಯಲ್ಲಿ ಪ್ರಥಮ MDRT ಸಾಧನೆ ಮಾಡಿರುತ್ತಾರೆ.

ಇವರನ್ನು ಮುಖ್ಯ ಶಾಖಾಧಿಕಾರಿ ಬಾಲಕೃಷ್ಣ ಡಿ ಯವರು ಶಾಲು ಹೊದಿಸಿ ಸನ್ಮಾನಿಸಿದರು. ಇವರು ಅಮೆರಿಕದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ವಿಮಾ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದಿರುತ್ತಾರೆ. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ವೆಂಕಟೇಶ ಮೂರ್ತಿ, ಹಾಗೂ ಶಾಖೆಯ ಎಲ್ಲ ಹಿರಿಯ ಕಿರಿಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.ಇವರು ಪಂಜದಲ್ಲಿ ಅಧಿಕೃತ LIC ಪ್ರೀಮಿಯಂ ಪಾಯಿಂಟ್ ಹಾಗೂ ವಹಿಕಲ್ ಇನ್ಸುರೇನ್ಸ್ ಸಂಸ್ಥೆ ಯನ್ನು ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here