ಮೈಸೂರು ದಸರಾ ವೇದಿಕೆಯಲ್ಲಿ ಸುಳ್ಯದ ರಂಗ ಮಯೂರಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ

0

 

ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಅಂಗವಾಗಿ
ಮೈಸೂರಿನ ಮಹಾರಾಜಾ ಕಾಲೇಜಿನ ವೇದಿಕೆ ಯಲ್ಲಿ ನಡೆಯುವ ಪ್ರತಿಷ್ಠಿತ”ಯುವದಸರಾ” ಕಾರ್ಯಕ್ರಮದಲ್ಲಿ ಸುಳ್ಯದ ರಂಗ ಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಯಕ್ಷನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡು ಪ್ರೇಕ್ಷಕರ ಮನಗೆದ್ದಿತು.

 

ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ತಂಡದ ಸಹಯೋಗದಲ್ಲಿ ವಿನೋದ್ ಕರ್ಕೇರ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರಾಹುಲ್ ಎಸ್ ರಾವ್ ,ಪೃಥ್ವಿ ನಾಯಕ್ ತಂಡದ ಹಿಪ್ ಹಾಪ್ ಡ್ಯಾನ್ಸ್ ಜೊತೆಗೆ ರಂಗಮಯೂರಿ ಕಲಾಶಾಲೆಯ ಯಕ್ಷಗಾನ ಗುರುಗಳಾದ ವಾಸುದೇವ ರೈ ಬೆಳ್ಳಾರೆ ನಿರ್ದೇಶನದಲ್ಲಿ ಮೂಡಿಬಂದ ಯಕ್ಷನೃತ್ಯ ‘ಮಹಿಷವಧೆ’ ಯ ಪಾತ್ರವರ್ಗದಲ್ಲಿ ಶಶಿಕಾಂತ್ ಮಿತ್ತೂರು, ವೈಷ್ಣವಿ ಶೆಟ್ಟಿ, ಲಕ್ಷ್ಯಜಿತ್ ಜಿ ರೈ ಪೇರಾಲು ಗುತ್ತು, ರಮ್ಯಶ್ರೀ ನಡುಮನೆ, ಸನಿಹ ಶೆಟ್ಟಿ, ಸಿಂಚನ ಪುತ್ತಿಲ, ಸೋನಾ ನಾರ್ಕೋಡು, ಪೃಥ್ವಿ ಎನ್ ರೈ, ರಕ್ಷ ಅಂಚನ್ ಮೊಣ್ಣಂಗೇರಿ, ರತ್ನಸಿಂಚನ ಜೆ ರವರು ಭಾಗವಹಿಸಿದರು.

LEAVE A REPLY

Please enter your comment!
Please enter your name here