ಸುಳ್ಯ ಲ್ಯಾಂಪ್ ಸೊಸೈಟಿ ಪಡಿತರ ಕೇಂದ್ರದಿಂದ  ಮಹಿಳೆ ಮೊಬೈಲ್ ಫೋನ್ ಎಗರಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

0
1850

ಸಿ ಸಿ ಕ್ಯಾಮರಾ ಫೂಟೇಜ್ ಸಹಾಯದಿಂದ ಮಹಿಳೆ ಪತ್ತೆ, ಮೊಬೈಲ್ ವಶ

ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಲ್ಯಾಂಪ್ ಸೊಸೈಟಿ ಪಡಿತರ ಕೇಂದ್ರದ ಮಹಿಳಾ ಸಿಬ್ಬಂದಿಯ ಮೊಬೈಲ್ ಫೋನನ್ನು ಮಹಿಳೆಯೋರ್ವರು ಕಳ್ಳತನ ಮಾಡಿದ ಸಿ ಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.

ಸೆಪ್ಟೆಂಬರ್ 24ರಂದು ಸಂಜೆ ಘಟನೆ ನಡೆದಿದ್ದು, ಲ್ಯಾಂಪ್ ಸೊಸೈಟಿಗೆ ಪಡಿತರ ಅಕ್ಕಿ ಪಡೆಯಲೆಂದು ಬಂದ ಮಹಿಳೆಯೋರ್ವರು ಈ ಕೃತ್ಯ ನಡೆಸಿದ್ದಾರೆಂದು ತಿಳಿದುಬಂದಿದೆ.
ಸೊಸೈಟಿಯಲ್ಲಿ ಬಿಲ್ ಕೌಂಟರಿನ ಮೇಲೆ ಇರಿಸಿದ್ದ ಸಿಬ್ಬಂದಿಯ ಮೊಬೈಲ್ ಫೋನನ್ನು ಮಹಿಳೆ ತನ್ನ ಕೈಯಲ್ಲಿದ್ದ ಬ್ಯಾಗನ್ನು ಇಟ್ಟು ಮುಚ್ಚಿಕೊಳ್ಳುತ್ತಾರೆ. ನಂತರ ತಾನು ಸೊಸೈಟಿಯಿಂದ ಖರೀದಿಸಿದ್ದ ಬಟ್ಟೆಯನ್ನು ಫೋನಿನ ಮೇಲೆ ಮುಚ್ಚಿ ನಂತರ ಬಟ್ಟೆಯನ್ನು, ಬ್ಯಾಗನ್ನು ಮತ್ತು ಫೋನನ್ನು ಒಟ್ಟಿಗೆ ತೆಗೆದು ಅಲ್ಲಿಂದ ತೆರಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ವಲ್ಪ ಸಮಯ ಕಳೆದು ಸಿಬ್ಬಂದಿ ನೋಡಿದಾಗ ಫೋನ್ ಮೇಜಿನ ಮೇಲೆ ಇರಲಿಲ್ಲ. ಹುಡುಕಾಡಿದರೂ ಎಲ್ಲಿಯೂ ಕಾಣಸಿಗಲಿಲ್ಲ. ಸಂಜೆ 4:30 ರಿಂದ 6.30 ರ ತನಕ ಫೋನಿಗೆ ಕರೆಗಳನ್ನು ಮಾಡಿದರೂ ರಿಂಗ್ ಆಗುತ್ತಿತ್ತೇ ಹೊರತು ಯಾರೂ ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಸೊಸೈಟಿಯ ಸಿ.ಸಿ. ಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬರು ಮೊಬೈಲ್ ಎಗರಿಸುತ್ತಿರುವುದು ಗೊತ್ತಾಯಿತು. ಕಳ್ಳತನ ವಾಗಿರುವ ಬಗ್ಗೆ ತಿಳಿದು ಬಂದಿದೆ.

” ಆ ಮಹಿಳೆ ಜಯನಗರ ಮೂಲದವರೆಂದು ಗೊತ್ತಾಗಿ, ನಾನು ಆಟೋ ಮಾಡಿಕೊಂಡು ಜಯನಗರಕ್ಕೆ ಹೋಗಿ ಆ ಮಹಿಳೆಯ ಮನೆಗೆ ಹೋಗಿ ವಿಚಾರಿಸಿದಾಗ ಮಹಿಳೆ ಫೋನನ್ನು ಹಿಂತಿರುಗಿಸಿದರು.
ನನಗೆ ಮೊಬೈಲ್ ಮರಳಿ ದೊರಕಿರುವ ಕಾರಣ ಏನನ್ನು ಹೇಳದೆ ಮಹಿಳೆಯಿಂದ ಮೊಬೈಲ್ ಪಡೆದುಕೊಂಡು ಹಿಂತಿರುಗಿ ಬಂದೆ” ಎಂದು ಮಹಿಳಾ ಸಿಬ್ಬಂದಿ ಸುದ್ದಿಯೊಡನೆ ಹೇಳಿದರು.

LEAVE A REPLY

Please enter your comment!
Please enter your name here