ಶ್ರೀ ಶಾಸ್ತಾವು ಆಟೋ ಚಾಲಕರ ಸಂಘ ಪೆರಾಜೆ ಘಟಕದ ಮಹಾಸಭೆ

0
88

 

ಸುಳ್ಯ ತಾಲೂಕು ಅಟೋ ಚಾಲಕರ ಸಂಘ ಬಿ.ಎಂ.ಎಸ್ ಸಂಯೋಜಿತ ಶ್ರೀ ಶಾಸ್ತಾವು ಆಟೋ ಚಾಲಕರ ಸಂಘದ ಮಹಾಸಭೆಯು ಶ್ರೀ ಶಾಸ್ತಾವು ಸಭಾಂಗಣದಲ್ಲಿ ಸೆ.30 ರಂದು ನಡೆಯಿತು.

 

ಈ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ವಹಿಸಿದ್ದರು, ವೇದಿಕೆಯಲ್ಲಿ ಆಟೋ ಚಾಲಕ ಸಂಘದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ಮರ್ಕಂಜ, ಪೆರಾಜೆ ಆಟೋ ಸಂಘದ ಅಧ್ಯಕ್ಷ ಚಂದ್ರಶೇಖರ ಕೊಡ್ಯಗುಂಡಿ ಉಪಸ್ಥಿತರಿದ್ದರು.
2021- 22ನೇ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಚಂದ್ರಶೇಖರ ಕೊಡ್ಯಾಗುಂಡಿ ವಾಚಿಸಿದರು. ಅನುಮೋದನೆ ದೊರೆಯಿತು. ಪೆರಾಜೆ ಘಟಕದ ಆಟೋ ರಿಕ್ಷಾ ಅಪಘಾತ ವಾದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಹಾಗೂ ಪೆರಾಜೆ ಘಟಕದ ವತಿಯಿಂದ ಚೇತನ್ ಅಡ್ಕ ಹಾಗೂ ಅಶ್ರಫ್ ಪಿ ಯಂ ರವರಿಗೆ ಪರಿಹಾರವನ್ನು ನೀಡಲಾಯಿತು.
2022-23ನೇ ಸಾಲಿನ ಅಧ್ಯಕ್ಷ ಚಂದ್ರಶೇಖರ ಕೊಡ್ಯಾಗುಂಡಿ ಹಾಗೂ ಉಪಾಧ್ಯಕ್ಷರಾಗಿ ಅಬೂಬಕ್ಕರ್ ರನ್ನು ಪುನರಾಯ್ಕೆ ಮಾಡಲಾಯಿತು. ಅಬೂಬಕ್ಕರ್ ಸ್ವಾಗತಿಸಿ ಹರ್ಷಿತ್ ಮಜಿಕೊಡಿ ವಂದಿಸಿದರು.

LEAVE A REPLY

Please enter your comment!
Please enter your name here