ಮುಂದಿನ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರು ?

0

 

 

ಸ್ಪರ್ಧೆಯ ಕುರಿತು ಸಚಿವ ಅಂಗಾರರು ಹೇಳಿದ್ದೇನು ?

ಮುಂಬರುವ ವಿಧಾನ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ಮಾಡುತ್ತಿದೆ. ನಮ್ಮ ಅಭಿಪ್ರಾಯವನ್ನು ಕೊನೆಯ ಕ್ಷಣದಲ್ಲಿ ಕೇಳುತ್ತಾರಷ್ಟೇ. ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದ ಕೆಲಸಗಳು ನಿರಂತರ ನಡೆಯುತ್ತಿದೆ. ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಹಲವು ಕಾರ್ಯಕಕ್ರಮಗಳನ್ನು ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.
ಇಂದು ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಸಚಿವ ಎಸ್.ಅಂಗಾರರು ಕರೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಮಂಡಲಾಧ್ಯಕ್ಷರಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯ ಕುರಿತು ಪತ್ರಕರ್ತರು ಕೇಳಿದಾಗ ಅವರು ಉತ್ತರಿಸಿದರು.
ಸಚಿವ ಅಂಗಾರರಲ್ಲಿ ಪತ್ರಕರ್ತರು ಚುನಾವಣೆಗೆ ಮತ್ತೆ ನೀವು ಸ್ಪರ್ಧಿಸುವಿರೇ? ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅಂಗಾರರು, `’ನಾನು ೧೯೮೯ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗಲೂ ನಾನು ಕೇಳಿ ಪಕ್ಷ ನನಗೆ ಸೀಟು ಕೊಟ್ಟದಲ್ಲ. ಪಕ್ಷವೇ ನನ್ನನ್ನು ಸೂಚಿಸಿ, ಪಕ್ಷವೇ ಖರ್ಚು ಭರಿಸಿ ನನ್ನನ್ನು ಗೆಲ್ಲಿಸಿದ್ದು. ಆ ಬಳಿಕದ ಚುನಾವಣೆಯಲ್ಲಿಯೂ ನಾನೇಂದು ನನಗೆ ಸೀಟು ಬೇಕೆಂದು ಕೇಳಿದವನಲ್ಲ. ಮುಂದಿನ ಚುನಾವಣೆಗೂ ಹಾಗೆ. ಎಲ್ಲ ನಿರ್ಧಾರವು ಪಕ್ಷದ ಕಡೆಯಿಂದಲೇ ಆಗುತ್ತದೆ ಎಂದು ಹೇಳಿದರು. ಪಕ್ಷ ಸೀಟು ಕೊಟ್ಟಲ್ಲಿ ಸ್ಪರ್ಧಿಸಲು ಇಚ್ಛೆ ಇದೆಯಾ ? ಎಂದು ಮರು ಪ್ರಶ್ನಿಸಿದಾಗ, “ಬಿಜೆಪಿಯಲ್ಲಿ ಪಕ್ಷದ ತೀರ್ಮಾನವೇ ಅಂತಿಮ” ಎಂದು ಸಚಿವರು ಹೇಳಿದರು.