ಮೀನುಗಾರರೇ ನನ್ನನ್ನು ಒಪ್ಪಿಕೊಂಡಿದ್ದಾರೆ : ಎ.ವಿ. ಟಿ

0

ರಬ್ಬರ್ ಬೆಳೆಗಾರರಿಗೆ ಸಹಕಾರ : ಮುಳಿಯ

ಜನರ ಬೇಡಿಕೆಗೆ ಪೂರಕವಾಗಿ ಕೆಲಸ :ಕಂದಡ್ಕ

`’ನಮ್ಮ ಆಯ್ಕೆಯಲ್ಲಿ ಯಾರಿಗು ಅಸಮಾಧಾನಗಳಿರಲಿಲ್ಲ. ಎಲ್ಲ ತೀರ್ಮಾನಗಳು ಪಕ್ಷದ ಕಡೆಯಿಂದಲೇ ಆಗುವುದು. ನಾವು ನಮಗೆ ಸಿಕ್ಕಿದ ಜವಾಬ್ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇವೆ” ಎಂದು ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ ಹೇಳಿದ್ದಾರೆ.
ಅ.೧ರಂದು ನಿರೀಕ್ಷಣಾ ಮಂದಿರದಲ್ಲಿ ಸಚಿವ ಎಸ್.ಅಂಗಾರರು ಕರೆದ ಪತ್ರಿಕಾಗೋಷ್ಠಿಲ್ಲಿ ಭಾಗವಹಿಸಿದ್ದ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
“ನಮಗೆ ಮೀನುಗಾರಿಗಾ ನಿಗಮಾಧ್ಯಕ್ಷತೆ ಸಿಕ್ಕಿರುವುದಕ್ಕೆ ಯು.ಟಿ. ಖಾದರ್ ಹೇಳಿಕೆಯೊಂದನ್ನು ನೀಡಿದ್ದರು. ಅವರು ರಾಜ್ಯದ ಆರೋಗ್ಯ ಮಂತ್ರಿಯಾಗಿದ್ದವರು. ಅವರೇನು? ಎಂ.ಬಿ.ಬಿ.ಎಸ್. ಓದಿದವರಾ?. ಅಭಯಚಂದ್ರ ಜೈನ್ ರವರು ಜೈನರು ಅವರು ಮೀನುಗಾರಿಗಾ ಮಂತ್ರಿಯಾಗಿರಲಿಲ್ವ? ಕಾಂಗ್ರೆಸ್‌ಗರು ಬಾಲಿಶ ಹೇಳಿಕೆಯನ್ನು ನೀಡುತ್ತಾರೆ ಹೊರತು ಅವರೇನೂ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವುದಿಲ್ಲ. ಜವಾಬ್ದಾರಿ ಯಾವುದೇ ಇರಲಿ ಅದನ್ನು ನಿಭಾಹಿಸುವ ಕೆಪಾಸಿಟಿ ಅವರಿಗೆ ಇರಬೇಕಷ್ಟೆ. ನನ್ನನ್ನು ಅಲ್ಲಿಯ ಜನರೇ ಈಗ ಒಪ್ಪಿಕೊಂಡಿ ಒಳ್ಳೆಯ ಮಾತನ್ನು ಹೇಳುತ್ತಿದ್ದಾರೆ” ಎಂದು ಅವರು ಹೇಳಿದರು.
ರಬ್ಬರ್ ಬೆಳೆಗಾರರಿಗೆ ಸಹಕಾರ : ನೂತನವಾಗಿ ಕೇಂದ್ರ ರಬ್ಬರ್ ಮಂಡಳಿ ನಿರ್ದೇಶಕರಾಗಿ ನೇಮಕಗೊಂಡ ಮುಳಿಯ ಕೇಶವ ಭಟ್ ಪ್ರತಿಕ್ರಿಯಿಸಿ, “ರಬ್ಬರ್ ಬೆಳೆಗಾರರಿಗೆ ನಮ್ಮಿಂದಾಗುವ ಸಹಕಾರ ನೀಡಲಾಗುವುದು. ಮುಂದಿನ ವಾರ ಮೊದಲ ಸಭೆ ನಡೆಯಲಿದೆ. ಅದರಲ್ಲಿ ಭಾಗವಹಿಸುವೆ ಎಂದು ಹೇಳಿದ ಅವರು, ರಬ್ಬರ್ ಫ್ಯಾಕ್ಟರಿ ಕುರಿತು ಮಾಜಿ ಸಿ.ಎಂ. ರವರು ಹೇಳಿದ್ದು ಆ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.
ಜನರ ಬೇಡಿಕೆಗೆ ಪೂರಕವಾಗಿ ಕೆಲಸ : “ನಗರ ವ್ಯಾಪ್ತಿಯಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿದರು.
“ನಗರೋತ್ಥಾನದಲ್ಲಿ ಈಗಾಗಲೇ ೫ ಕೋಟಿ ರೂ ಅನುದಾನ ಬಂದಿದೆ. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕಲ್ಚೆರ್ಪೆಯಲ್ಲಿ ತ್ಯಾಜ್ಯ ವಿಂಗಡಣೆಗಾಗಿ ಈಗಾಗಲೇ ೩ ಎಕ್ರೆ ಜಾಗದ ಕುರಿತು ಇದ್ದ ಗೊಂದಲ ಇತ್ಯರ್ಥವಾಗಿ ಜಾಗ ನ.ಪಂ. ಸಿಕ್ಕಿದೆ. ಕಳೆದ ೨ ವರ್ಷದಲ್ಲಿ ನಗರ ವ್ಯಾಪ್ತಿಯಲ್ಲಿ ೫ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳು ಆಗಿದೆ. ವಿಶೇಷವಾಗಿ ಕುಡಿಯುವ ನೀರಿಗೆ ಸಂಬಂಧಿಸಿ ವೆಂಟೆಡ್ ಡ್ಯಾಮ್‌ಗೆ ರೂ.೧೭ ಕೋಟಿ ಅನುದಾನ ಮಂಜೂರುಗುಂಡಿದ್ದು ಶೀಘ್ರವೇ ಶಿಲಾನ್ಯಾಸ ನಡೆಸಲಾಗುವುದು. ಅದಲ್ಲದೆ ಕುರಿಯುವ ನೀರಿನ ಯೋಜನೆಗೆ ಅಮೃತ್ ಯೋಜನೆಯಲ್ಲಿ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಅವರು ಕೆಲಸ ಕಾರ್ಯಗಳ ವಿವರ ನೀಡಿದರು.