ನವ ರಾತ್ರಿಗೆ ನವ ಬಣ್ಣಗಳ ಮೆರುಗು

0

ಇಂದಿನ ಬಣ್ಣ ಬೂದು

ನವರಾತ್ರಿ ಸಂಭ್ರಮ. ಭಕ್ತಿ, ಶ್ರದ್ಧೆ, ಸಡಗರಗಳಿಂದ ನವರಾತ್ರಿಯನ್ನು ಕೊಂಡಾಡಲಾಗುತ್ತದೆ.‌ಸುದ್ದಿ ವೆಬ್‌ಸೈಟ್ ಈ ಬಾರಿಯೂ ನವರಾತ್ರಿಯನ್ನು ನವ ಬಣ್ಣಗಳ ಮೆರುಗಿನೊಂದಿಗೆ ಆಚರಿಸಲು ಸಿದ್ಧವಾಗಿದೆ. 9 ದಿನಗಳಲ್ಲಿ ಆಯಾ ದಿನದ ಬಣ್ಣಗಳಿಗೆ ಅನುಗುಣವಾಗಿ ಬಣ್ಣಗಳ ವಸ್ತ್ರ ಧರಿಸಿ ಸಂಭ್ರಮಿಸಿ ಇದರ ಆಕರ್ಷಕ ಪೋಟೋ ತೆಗೆದು ನಮಗೆ ಕಳುಹಿಸುವಂತೆ ಕೋರಲಾಗಿತ್ತು. ಬಂದ ಪೊಟೋಗಳಲ್ಲಿ ನಮ್ಮ ಸೂಚನೆಯನ್ನು ಪಾಲಿಸಿದ ಆಯ್ದ ಪೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

  • ಫೊಟೋ ಕಳುಹಿಸುವವರು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಆಯಾ ದಿನ ಪ್ರಕಟಿಸಲಾದ ಬಣ್ಣಗಳ ವಸ್ತ್ರಗಳನ್ನು ಧರಿಸಿ ಗುಂಪಿನ ಪೋಟೋ ಕಳುಹಿಸಬೇಕು.
  • ಒಂದು ಪೋಟೋದಲ್ಲಿ ಕನಿಷ್ಠ ಮೂರು ಮಂದಿ ಇರಲೇ ಬೇಕು.
  • ಪೋಟೋಗಳನ್ನು ಆಯಾ ದಿನ ಮಧ್ಯಾಹ್ನ 12 ಗಂಟೆಯ ಒಳಗೆ ಕಳುಹಿಸಲೇಬೇಕು. ಆ ಬಳಿಕ ಬಂದವುಗಳನ್ನು ಗಮನಿಸಲಾಗುವುದಿಲ್ಲ.
  • ಪೋಟೋದೊಂದಿಗೆ ಕನ್ನಡದಲ್ಲಿ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ನಮೂದಿಸಬೇಕು.
  • ಒಬ್ಬರು ಒಂದು ಪೋಟೋವನ್ನಷ್ಟೇ ಕಳುಹಿಸಬೇಕು. ಒಂದಕ್ಕಿಂತ ಹೆಚ್ಚು ಪೋಟೋಗಳಿದ್ದರೆ ಗಮನಿಸಲಾಗುವುದಿಲ್ಲ. ಪೋಟೋ ಕಳುಹಿಸಲು ಪ್ರಾಯ ಭೇದವಿಲ್ಲ. ಮಹಿಳೆಯರು, ಪುರುಷರು ಪೋಟೋ ಕಳುಹಿಸಬಹುದು.
  • ನವ ಬಣ್ಣಗಳ ಮೆರುಗಿಗೆಂದೇ ಪ್ರತ್ಯೇಕವಾಗಿ ಫೊಟೋ ತೆಗೆದು ಕಳುಹಿಸಿ. ಎಂದೋ ತೆಗೆದ ಫೊಟೋಗಳನ್ನು ಕಳುಹಿಸಬೇಡಿ. ಸೆಲ್ಫಿ ಪೊಟೋಗಳನ್ನೂ ಪರಿಗಣಿಸಲಾಗುವುದಿಲ್ಲ. ಫೊಟೋಗಳಲ್ಲಿರುವ ಎಲ್ಲರೂ ಕೂಡಾ ಆಯಾ ದಿನದ ಬಣ್ಣಗಳನ್ನು ಪ್ರತಿನಿಧಿಸುವಂತಿರಬೇಕು.‌ ಆದುದರಿಂದ ಮಿಶ್ರ ಬಣ್ಣಗಳಿರುವ ಫೊಟೋಗಳನ್ನು ಕಳುಹಿಸಬೇಡಿ.