ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೀರು ಶುದ್ದೀಕರಣ ಘಟಕ ಕೊಡುಗೆ

0
411

 

p>

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕ್ಕೆ ಬೆಂಗಳೂರಿನ ಜಲದುರ್ಗಾ ಟೆಕ್ನಾಲಜಿಯ ಮಾಲಕರಾದ ಹರಿದಾಸ್ ಮತ್ತು ಸಂಸ್ಥೆ ಯ ಸುಶೀಲಾ.ಪಿ, ಕೌಶಿಕ್.ಎಚ್ ಮತ್ತು ಕವಿನ್ ಬೀಷ್ಮ ಅವರು ಸುಮಾರು 2 ಲಕ್ಷದ 98ಸಾವಿರ ರೂ ಮೌಲ್ಯದ ನೀರು ಶುದ್ದೀಕರಣ ಘಟಕವನ್ನು ಕೊಡುಗೆಯಾಗಿ ನೀಡಿದ್ದಾರೆ‌. ದೇವಳದ ಆಡಳಿತ ಕಚೇರಿ ಬಳಿ ಭಕ್ತರ ಉಪಯೋಗಕ್ಕಾಗಿ ನೂತನವಾಗಿ ಅಳವಡಿಸಿರುವ ಘಟಕವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಅ.1 ರಂದು ಉದ್ಘಾಟಿಸಿದರು.

ನೀರು ಶುದ್ದೀಕರಣ ಘಟಕವು ಶುದ್ದ ಕುಡಿಯುವ ನೀರು ಮತ್ತು ಬಿಸಿ ನೀರಿನ ವ್ಯವಸ್ಥೆ ಹೊಂದಿದೆ.
ಶುದ್ದ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದವರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಅವರು ದೇವಳದ ಆಡಳಿತ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.


ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್, ಶ್ರೀಮಂತ ಜೋಳದಪ್ಪಗೆ, ನೋಣಪ್ಪ ಗೌಡ, ಮೋಹನ್ ಎಂ.ಕೆ, ನಿಂಗಣ್ಣ, ಅಶೋಕ್ ಅತ್ಯಡ್ಕ,ಸುಪ್ರೀತ್, ಶೋಭಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here