ಹಾಲೆಮಜಲು : ಸ್ವಚ್ಛತೆ

0
94

 

 

ಆದರ್ಶ ಯೂತ್ ಕ್ಲಬ್ ಹಾಲೆಮಜಲು ಇದರ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಜಾಲ್ಸೂರು – ಸುಬ್ರಹ್ಮಣ್ಯ ರಸ್ತೆಯ ಹಾಲೆಮಜಲು ಬಸ್ ತಂಗುದಾಣ ಬಳಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲೆಮಜಲು ಇಲ್ಲಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಗಿಡಗಂಟಿಗಳನ್ನು ಕಡಿದು ರಸ್ತೆ ಬದಿಯಿಂದ ತ್ಯಾಜ್ಯಗಳನ್ನು ಗೋಣಿಚೀಲಗಳಲ್ಲಿ ಸಂಗ್ರಹಿಸಿ ಗುತ್ತಿಗಾರು ಗ್ರಾಮ ಪಂಚಾಯತ್ ಇಲ್ಲಿನ ಗನ ತ್ಯಾಜ ಘಟಕಕ್ಕೆ ಹಸ್ತಾಂತರಿಸಲಾಯಿತು.
ಶ್ರಮದಾನದಲ್ಲಿ ಕ್ಲಬ್ ನ ಅಧ್ಯಕ್ಷ ದಿನೇಶ ಹಾಲೆಮಜಲು, ಕಾರ್ಯದರ್ಶಿ ನವೀನ್ ಗುಡ್ಡೆಮನೆ, ಖಜಾಂಜಿ ಹರಿಪ್ರಸಾದ್ ಕಡವೆಪಳ್ಳ, ಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಸೇರಿದಂತೆ ಅನೇಕ ಮಂದಿ ಸದಸ್ಯರು ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here