ಡಾ|| ಮುರಲೀ ಮೋಹನ್ ಚೂಂತಾರು ಪುತ್ತೂರು ಗೃಹರಕ್ಷಕದಳದ ಕಚೇರಿಗೆ ಭೇಟಿ

0

ಅ. 02ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಪುತ್ತೂರು ಗೃಹರಕ್ಷಕದಳದ ಕಚೇರಿಗೆ ಭೇಟಿ ನೀಡಿ, ವಾರದ ಕವಾಯತನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇವರ ವತಿಯಿಂದ ಜಗನ್ನಾಥ್ ಹಾಗೂ ಸುದರ್ಶನ್ ಜೈನ್ ಅವರನ್ನು ಫಲ ಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ನ ಅಧ್ಯಕ್ಷರಾದ ರೊ. PHF ಶರತ್ ಕುಮಾರ್ ರೈ, ಕಾರ್ಯದರ್ಶಿ ರೊ. ಶಶಿಕಿರಣ್ ರೈ, ಸದಸ್ಯರಾದ ರೋ ವಸಂತ ಜಾಲಾಡಿ, ರೋ ಚಂದ್ರಶೇಖರ್, ರೋ ಪ್ರಕಾಶ್ ರೈ, ರೋ ವಂದನಾ ಶರತ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here