ಆಲೆಟ್ಟಿ: ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸುಳ್ಯ ದಸರಾಕ್ಕೆ ಸ್ಥಬ್ಧ ಚಿತ್ರ ಟ್ಯಾಬ್ಲೊ – ಆಮಂತ್ರಣ ಪತ್ರ ಬಿಡುಗಡೆ

0

 

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸುಳ್ಯದಲ್ಲಿ ನಡೆಯಲಿರುವ 51 ನೇ ವರ್ಷದ ದಸರಾ 2022 ರ ಶ್ರೀ ದೇವಿಯ ಶೋಭಾಯಾತ್ರೆಯ ಸಂದರ್ಭದಲ್ಲಿ ಪ್ರಥಮ ವರ್ಷದ ಕಲಾ ಕಾಣಿಕೆ ವಿದ್ಯುತ್ ದೀಪದಿಂದ ಅಲಂಕೃತ ಸ್ಥಬ್ಧ ಚಿತ್ರದ ಟ್ಯಾಬ್ಲೋ ಇದರ ಆಮಂತ್ರಣ ಪತ್ರಿಕೆಯನ್ನು ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಅ.2 ರಂದು ಬಿಡುಗಡೆ ಮಾಡಲಾಯಿತು. ದೇವಳದ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ಪ್ರಾರ್ಥಿಸಿದರು.

ಪಂ.ಉಪಾಧ್ಯಕ್ಷ ದಿನೇಶ್ ಕಣಕ್ಕೂರು,
ಅರ್ಚಕ ಸುಬ್ರಾಯ ಭಟ್ ,ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ, ಸದಸ್ಯರಾದ ನಿತಿನ್ ಗುಂಡ್ಯ, ವಿಷ್ಣು ಪ್ರಸಾದ್ ಗುಂಡ್ಯ ಉಪಸ್ಥಿತರಿದ್ದರು.