ಪಂಜ: ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

0

 

ಮಾಡಬಾಗಿಲು ಕಂಬಳ ಆನಂದ ಗೌಡ ಟ್ರಸ್ಟ್ ಕಂಬಳ 7ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಅ.2 ರಂದು ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಜರುಗಿತು ಮಾಡಬಾಗಿಲು ಟ್ರಸ್ಟ್ ಅಧ್ಯಕ್ಷ ಬಿ.ಎಂ. ಆನಂದ ಗೌಡ ಕಂಬಳ ಸಭಾಧ್ಯಕ್ಷತೆ ವಹಿಸಿದ್ದರು.

ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಬಾಬು ಗೌಡ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿ ಮಾಡಿಬಾಗಿಲು ಕಂಬಳ ಆನಂದ ಗೌಡ ರವರದು ಕೃಷಿ ಕುಟುಂಬ ‌.ಕೃಷಿ ಕುಟುಂಬ ವೊಂದು ಈ ಅಪರೂಪದ ವಿಶೇಷ ಕಾರ್ಯಕ್ರಮ ಮಾಡಿದೆ.ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆ ಪೂರಕವಾದ ವಿಶೇಷವಾದ ಮಾದರಿ ಕಾರ್ಯಕ್ರಮವಾಗಿದೆಳಇದರಿಂದ ಇತರ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ ” ಎಂದು
ಹೇಳಿದರು. ಅತಿಥಿಯಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ‌,ಪಂಜ ಸರಕಾರಿ ಪದವಿ ಪೂರ್ವ ಕಾಲೇಜು
ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ, ಮುಖ್ಯ ಶಿಕ್ಷಕ ಟೈಟಸ್ ವರ್ಗೀಸ್, ಟ್ರಸ್ಟಿಗಳಾದ ಶ್ರೀಮತಿ ಬಿ.ಎಂ.ಗಂಗಮ್ಮ, ಶ್ರೀಮತಿ ಸುಧಾ ಯಶವಂತ ಕುದುಂಗು,
, ಹೇಮಂತ್ ಕುಮಾರ್ ಕಂಬಳ , ದಾಸ್ ಪ್ರಕಾಶ್ ಕಂಬಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇತನ ವಿತರಣೆ :
ಕಾರ್ಯಕ್ರಮದಲ್ಲಿ 2021 -22ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಳ್ಯ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿ ವೇತನ, ಪುರಸ್ಕಾರ ನಡೆಯಿತು.ರೂ.10 ಲಕ್ಷದ ಶಾಶ್ವತ ವಿದ್ಯಾನಿಧಿಯ ಬಡ್ಡಿಯ ಹಣ ಗಳಿಕೆಯನ್ನು.ಕನ್ನಢ, ಗಣಿತ, ವಿಜ್ಞಾನ ವಿಷಯದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಮತ್ತು ಪುರಸ್ಕಾರ ಪ್ರತೀ ವರುಷ ನೀಡಲಾಗುತ್ತದೆ. ಕನ್ನಡ ವಿಷಯದಲ್ಲಿ 125 ಅಂಕ ಗಳಿಸಿದ
ಶೃತಿ ಕೆ ದುಗಲಡ್ಕ, ಪ್ರೀತಿಕಾ ಎಂ ಎಸ್ ದುಗಲಡ್ಕ , ಪವನ್ ಕುಮಾರ್ ಕೆ ಐವರ್ನಾಡು, ಸಂಶುದ್ದೀನ್ ಕೆ.ಪಿ.ಎಸ್ ಬೆಳ್ಳಾರೆ,ವರುಣಾ ಎಂ ವಿ ಅಜ್ಜಾವರ,ಪುಜಿತಾ ಎಂ ಎಡಮಂಗಲ, ಪವನ್ ಕುಮಾರ್ ಎಣ್ಮೂರು, ಆತ್ಮಶ್ರೀ ಎಲಿಮಲೆ,ಧನ್ವಿ ಎನ್ ಕೆ ಎಲಿಮಲೆ, ದಿವ್ಯಶ್ರೀ ಎಸ್ ಎಲಿಮಲೆ, ನಿಶ್ಮಿತಾ ಮರ್ಕಂಜ ತಲಾ ರೂ.3000 ಮತ್ತು ಪುರಸ್ಕಾರ ,ಗಣಿತ‌‌
ವಿಷಯದಲ್ಲಿ 100 ಅಂಕ ಗಳಿಸಿದ ಪ್ರಿಯಂವದ ಎನ್ ಐವರ್ನಾಡು, ಫಾತಿಮತ್ ಝಯಿದಾ ಕೆಪಿಎಸ್ ಗಾಂಧಿನಗರ ತಲಾ ರೂ.16000 ಮತ್ತು ಪುರಸ್ಕಾರ , ವಿಜ್ಞಾನ ವಿಷಯದಲ್ಲಿ 100 ಅಂಕ ಗಳಿಸಿದ ಕಾವ್ಯ ಶ್ರೀ ಕೆ.ಪಿ.ಎಸ್ ಬೆಳ್ಳಾರೆ,ಮೋಕ್ಷಿತ್ ಕೆ ಬಿ ಎಣ್ಮೂರು,ಜೀವಿತ್ ಕೆ ಆರ್ ಎಣ್ಮೂರು,ರಕ್ಷಿತಾ ಎನ್ ಕೆ ಎಲಿಮಲೆ, ಭವ್ಯ ಬಿ ಮರ್ಕಂಜ ತಲಾ ರೂ.6000 ಮತ್ತು ಪುರಸ್ಕಾರ ಸ್ಸೀಕರಿಸಿದರು. ಇದೆ ವೇಳೆ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಿನಿತಾ, ಮಹಮದ್ ಆನಾಸ್ ರವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಸವಿತಾ ಹೇಮಂತ್ ಕುಮಾರ್ ಕಂಬಳ ಸ್ವಾಗತಿಸಿದರು.ಶಿಕ್ಷಕ ಪುರಂದರ ಪನ್ಯಾಡಿ ನಿರೂಪಿಸಿದರು.ಡಾ.ಗೀತಾ ದಾಸ್ ಪ್ರಕಾಶ್ ಕಂಬಳ ವಂದಿಸಿದರು.