ಜಯನಗರ : ಜೇನುಗೂಡು ಸ್ವಯಂಸೇವಕರ ಸಂಘದ ವತಿಯಿಂದ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ

0
54

 

ಸುಳ್ಯ ಜಯನಗರ ಜೇನುಗೂಡು ಸ್ವಯಂಸೇವಕರ ಸಂಘದ ವತಿಯಿಂದ ಜಯನಗರ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಜಯನಗರ ನಿಸರ್ಗ ಇಂಡಸ್ಟ್ರೀಸ್ ಬದಿಯಿಂದ ಕೊರಂಬಡ್ಕ ಆದಿ ಮೊಗೇರ್ಕಳ ದೈವಸ್ಥಾನದ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಹಲಸು, ಪೇರಳೆ,ನೆರಳೆ ಮುಂತಾದ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಸಂಘದ ಸದಸ್ಯರ ಹೆಸರುಗಳನ್ನು ಗಿಡಕ್ಕೆ ಹಾಕಿರುವ ಬೇಲಿಗಳಲ್ಲಿ ನೋಂದಾಯಿಸಿದ್ದು ಗಿಡ ಬೆಳವಣಿಗೆಗೆ ಸದಸ್ಯರ ಸಹಕಾರವಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಂಕೇರಿ, ಶಿಲ್ಪಾ ಸುದೇವ್, ರೋಹಿತ್ ಕೊಯಿಂಗೋಡಿ, ಸಂಘದ ಸದಸ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here