ಗಾಂಧಿ ಜಯಂತಿ ವಿಶೇಷ ಗ್ರಾಮ ಸಭೆ ಮತ್ತು ಅಮ್ಮನಿಗಾಗಿ ಒಂದು ಪುಸ್ತಕ ಅಭಿಯಾನ

0

 

ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗಾಂಧಿ ಜಯಂತಿ ಗ್ರಾಮ ಸಭೆ ಹಾಗೂ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವು ಶ್ರೀಮತಿ ರೇವತಿ ಆಚಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು . ಪಂಚಾಯತ್ ಘನತ್ಯಾಜ್ಯ ಘಟಕದ ಸಿಬ್ಬಂದಿಗಳಿಗೆ ಸರಕಾರದ ಅನುದಾನದಿಂದ ಬಂದ ಸಮವಸ್ತ್ರವನ್ನು ಹಸ್ತಾಂತರಿಸಲಾಯಿತು ಗ್ರಾಮ ಪಂಚಾಯಿತಿ ಗ್ರಂಥಾಲಯದ ಅಮ್ಮನಿಗಾಗಿ ಒಂದು ಪುಸ್ತಕ ಅಭಿಯಾನಕ್ಕೆ ಅಧ್ಯಕ್ಷರು / ಉಪಾಧ್ಯಕ್ಷರು ಚಾಲನೆ ನೀಡಿದರು . ಸ್ವಚ್ಛತೆಯ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವೆಂಕಟ್ ವಳಲಂಬೆ ಮಾತನಾಡಿದರು . ಗ್ರಂಥಾಲಯದ ಅಮ್ಮನಿಗಾಗಿ ಒಂದು ಪುಸ್ತಕ ಬಗ್ಗೆ ಮಾಹಿತಿಯನ್ನು ಮೇಲ್ವಿಚಾರಕಿ ಶ್ರೀಮತಿ ಅಭಿಲಾಷರವರು ಸಭೆಗೆ ತಿಳಿಸಿ ಅಂಗನವಾಡಿ ಪುಟಾಣಿಗಳು ಪುಸ್ತಕ ಎರವಲು ಪಡೆದರು . ಪಂಚಾಯತ್ ಪಿಡಿಒ ಶ್ರೀ ಧನಫತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ನುಡಿದರು .ಸಿಬ್ಬಂದಿ ಶ್ರೀಮತಿ ತೇಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇದರ ಅಧ್ಯಕ್ಷರು ಸರ್ವ ಸದಸ್ಯರು ಗ್ರಾಮಪಂಚಾಯತ್ ಸೇರಿಕೊಂಡು ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಿದರು , ಅಮರ ಸಂಜೀವಿನಿ ಒಕ್ಕೂಟ, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here