ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಆಯ್ಕೆಯಾದ ಸುಳ್ಯ ತಾಲೂಕಿನ ವಿದ್ಯಾರ್ಥಿಗಳು

0

 

ಸೆ. 27, 28ರಂದು ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾಟವು ಸೈಂಟ್ ಜೋಸೆಫ್ ಪ್ರೌಢಶಾಲೆ ಬಜ್ಪೆಯಲ್ಲಿ ನಡೆದಿದ್ದು, ಈ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕರ ವಿಭಾಗವು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಜಿಲ್ಲಾ ಮಟ್ಟದಲ್ಲಿ ಸೆ. 23 ರಂದು ಸುಳ್ಯ ತಾಲ್ಲೂಕಿನ ವಿದ್ಯಾರ್ಥಿಗಳು ರನ್ನರ್ ಅಪ್ ನಡೆದಿದ್ದು, ಇದರಲ್ಲಿ 4 ವಿದ್ಯಾರ್ಥಿಗಳು ಗ್ರೀನ್ ವ್ಯೂ ಶಾಲೆ ಹಾಗೂ ಒಬ್ಬ ವಿದ್ಯಾರ್ಥಿ ಸ.ಉ.ಹಿ.ಪ್ರಾ.ಶಾಂತಿನಗರ ಶಾಲೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದರು. ಗ್ರೀನ್ ಶಾಲೆಯ ವಿದ್ಯಾರ್ಥಿಗಳಾದ ಆರನೇ ತರಗತಿಯ ಮೊಹಮ್ಮದ್ ಅಮೀರ್ ಶಾಮೀಲ್, ಶಾಝಿನ್ ಅಬೂಬಕ್ಕರ್, ಮುಹಮ್ಮದ್ ರಮೀಲ್ ಮತ್ತು ಏಳನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಶೋಯಬ್ ಹಾಗೂ ಸ.ಉ.ಹಿ.ಪ್ರಾ.ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿತೀಶ್ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಗ್ರೀನ್‌ವ್ಯೂ ಶಾಲಾ ಶಿಕ್ಷಕಿ ಪ್ರತಿಭಾ ಎಸ್. ಆಳ್ವ ತರಬೇತಿ ನೀಡಿದ್ದರು. ಶಾಲಾ ಸಂಚಾಲಕರು, ಆಡಳಿತ ಮಂಡಳಿ, ಮುಖ್ಯ ಶಿಕ್ಷಕ ಅಬ್ದುಲ್ ರಹೀಂ ಹಾಗೂ ಶಿಕ್ಷಕರು ಸಹಕರಿಸಿದ್ದರು.