ಅ.10: ಆಲೆಟ್ಟಿ (ನಾರ್ಕೋಡು)ಯಲ್ಲಿ ಬೃಹತ್ ಆರೋಗ್ಯ ಮೇಳ ಉಚಿತ ಆರೋಗ್ಯ ತಪಾಸಣಾ ಶಿಬಿರ

0

 

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಆಲೆಟ್ಟಿ ಗ್ರಾಮ ಪಂಚಾಯತ್, ಆಲೆಟ್ಟಿ ಪ್ರಾ.ಕೃ.ಸ.ಸಂಘ ಆಲೆಟ್ಟಿ, ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ, ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯ ದೇರಳಕಟ್ಟೆ ಮಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ
ಬೃಹತ್ ಆರೋಗ್ಯ ಮೇಳ-ಉಚಿತ ಆರೋಗ್ಯ ತಪಾಸಣಾ ಶಿಬಿರವು ಅ.10 ರಂದು ಆಲೆಟ್ಟಿಯ (ನಾರ್ಕೋಡು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಸೇವಾ ಸೌಲಭ್ಯಗಳು ದೊರೆಯುತ್ತದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಪಂಚಾಯತ್ ಅಧ್ಯಕ್ಷ ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.