ಬೆಂಗಳೂರಿನ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಅರೆಭಾಷೆ ವಿಶ್ವಕೋಶ ಬಿಡುಗಡೆ, ವಿಚಾರಗೋಷ್ಟಿ

0

 

ಬೆಂಗಳೂರಿನ `ನಮ್ಮನೆ’ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಅರೆಭಾಷೆ ವಿಶ್ವಕೋಶ ಬಿಡುಗಡೆ, ವಿಚಾರಗೋಷ್ಠಿ ಹಾಗೂ ಅರೆಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಸೆ.,25 ರಂದು ನಡೆಯಿತು.


ಶ್ರೀಮತಿ ನೇಹಾ ರೋಶನ್ ಪೋರೆಯನ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆ ಹಾಗೂ ವಿಶ್ವಕೋಶದ ಬಿಡುಗಡೆ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯರಾದ ಡಿ.ವಿ.ಸದಾನಂದ ಗೌಡರು ನೆರವೇರಿಸಿದರು. ಡಾ.ಹಾ.ತಿ.ಕೃಷ್ಣೇಗೌಡ, ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ ಇವರು ವಿಶ್ವಕೋಶದ ಬಗ್ಗೆ ತಿಳಿಸಿದರು. ಅರೆಭಾಷೆ ವಿಚಾರ ಗೋಷ್ಠಿಯಲ್ಲಿ ಡಾ.ಅಶ್ವಿನಿ ರಾಜೇಶ್ ತೇನನ ಸಹ ಪ್ರಾಧ್ಯಾಪಕರು, ಸ.ಪ್ರ.ದ.ಕಾಲೇಜು ರಾಮನಗರ ಅವರು `ನಗರ ಮತ್ತು ಅವ್ವಭಾಷೆ’ ಬಗ್ಗೆ ಮಾತನಾಡಿದರು ಹಾಗೂ ಜಬ್ಬಾರ್ ಸಮೋ, ಹಿರಿಯ ಯಕ್ಷಗಾನ ಅರ್ಥದಾರಿಗಳು, `ಅದಿವೃಕ್ತಿ ಮಾಧ್ಯಮಲಿ ಅರೆಬಾಷೆ’ ವಿಷಯದ ಬಗ್ಗೆ ತಿಳಿಸಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಮದ್ರಾಸ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ರಾಮಸ್ವಾಮಿ ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ವಹಿಸಿದ್ದರು. ವಿಚಾರ ಗೋಷ್ಠಿಯ ನಂತರ `ಶ್ರೀ ಕೃಷ್ಣಾ ಸಂಧಾನ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಭಾಗವತರಾಗಿ ಶ್ರೀಮತಿ ಭವ್ಯಶ್ರೀ ಕುಲ್ಕುಂದ, ಮದ್ದಳೆ ಅಕ್ಷಯ ರಾವ್ ವಿಟ್ಲ, ಚಂಡೆ ಶ್ರೀಶ ರಾಮ್ ನಿಡ್ಲೆ, ವಿದುರನಾಗಿ ನಾರಾಯಣ ಗೌಡ ಕೊಳ್ತಿಗೆ, ಕೌರವನಾಗಿ ಜಬ್ಬಾರ್ ಸಮೋ ಸಂಪಾಜೆ, ಕೃಷ್ಣನಾಗಿ ಜಯಾನಂದ ಸಂಪಾಜೆ ಇವರು ಭಾಗವಹಿಸಿದರು. ಅತಿಥಿಗಳಾಗಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಅಧ್ಯಕ್ಷ ರವೀಂದ್ರನಾಥ್ ಕೇವಳ, ಕೊಡಗು ಗೌಡ ಸಮಾಜ ಅಧ್ಯಕ್ಷ ಕೇಕಡ ನಾಣಯ್ಯ ಬೆಂಗಳೂರು, ಅಜಿತ್ ಕುಮಾರ್ ಕುಂಞಳಿಯನ, ಅಧ್ಯಕ್ಷರು ಯಲಹಂಕ ಗೌಡ ಸಮಾಜ ಬೆಂಗಳೂರು, ದೇವಯ್ಯ ಕತ್ರಿಕೊಲ್ಲಿ ಅಧ್ಯಕ್ಷರು ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಅಕಾಡೆಮಿಯ ಸದಸ್ಯರು ವೇದಿಕೆಯಲ್ಲಿದ್ದರು. ಧನಂಜಯ ಅಗೋಳಿಕಜೆಯವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here