ಅರ್ಚಕರುಗಳ ಮನೆಗೆ ಬಂದು ಚಿನ್ನ ಲೂಟಿ ಮಾಡುವ ಕಳ್ಳರ ಜಾಲ

0

ಎಚ್ಚರದಿಂದಿರಲು ಸುಳ್ಯ ಪೊಲೀಸರಿಂದ ಸೂಚನೆ

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅರ್ಚಕರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳರ ತಂಡವೊಂದು ಮನೆಯಿಂದ ಚಿನ್ನವನ್ನು ಲೂಟಿ ಮಾಡುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ.

ಈ ಹಿನ್ನಲೆಯಲ್ಲಿ ಈ ಫೋಟೋದಲ್ಲಿರುವ ಅಪರಿಚಿತ ವ್ಯಕ್ತಿಗಳು ಕುಶಾಲನಗರ ಮತ್ತು ಉಪ್ಪಿನಂಗಡಿ ಠಾಣಾ ಸರಹದ್ದಿನಲ್ಲಿ ದೇವಸ್ಥಾನ ಅರ್ಚಕರ ಮನೆಯವರಲ್ಲಿ ವ್ಯಾಪಾರ ಪ್ರಾರಂಭಿಸುವುದಾಗಿ ತಿಳಿಸಿ ತಮ್ಮಲ್ಲಿರುವ ಮಾಂಗಲ್ಯ ಸರವನ್ನು ನೋಟಿನ ಮೇಲೆ ಇಡುವಂತೆ ತಿಳಿಸಿ, ಚಿನ್ನಾಭರಣವನ್ನ ದೋಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ಎಲ್ಲರೂ ಅಪರಿಚಿತ ವ್ಯಕ್ತಿಗಳು ಬಂದಾಗ ಅವರ ಕೈಗೆ ಚಿನ್ನ ನೀಡದೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸ್ ಠಾಣಾ ವತಿಯಿಂದ ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here