ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ರಜತ ವರ್ಷಾಚರಣೆ

0

 

ಶಾಲೆಗೆ ನೀರು ಶುದ್ಧೀಕರಣ ಯಂತ್ರ ಕೊಡುಗೆ, ಗುರು ವಂದನಾ ಕಾರ್ಯಕ್ರಮ

ವಿದ್ಯಾಭೋಧಿನಿ ಪ್ರೌಢಶಾಲೆ ಬಾಳಿಲ ಇಲ್ಲಿನ 1997 -98 ನೇ ಸಾಲಿನ ಎಸ್ ಎಸ್ ಎಲ್ ಸಿ ಬ್ಯಾಚ್ ನ ರಜತ ವರ್ಷಾಚರಣೆಯನ್ನು ಇಂದು ಅದೇ ಶಾಲೆಯಲ್ಲಿ ಆಚರಿಸಲಾಯಿತು. ರಜತ ವರ್ಷದ ಪ್ರಯುಕ್ತ ಶಾಲೆಗೆ ನೀರು ಶುದ್ಧೀಕರಣ ಮತ್ತು ನ್ಯಾಪ್ ಕಿನ್ ಬರ್ನಿಂಗ್ ಮೆಶಿನ್ ನ್ನು ಕೊಡುಗೆಯಾಗಿ ನೀಡಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಬಿ.ವಿ ಶಗ್ರಿತ್ತಾಯ ಶುದ್ದೀಕರಣ ಯಂತ್ರವನ್ನು ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.


ಶಾಲಾ ಆಡಳಿತ ಮಂಡಳಿಯ ಸಂಚಾಲಕ ಪಿ. ಜಿ. ಎಸ್ ಪ್ರಸಾದ್ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಬಿ.ವಿ ಶಗ್ರಿತ್ತಾಯ, ಆಡಳಿತ ಮಂಡಳಿಯ ಕೋಶಾಧಿಕಾರಿ ರಾಧಾಕೃಷ್ಣ ಉಡುವೆಕೋಡಿ, ಶಾಲಾ ಮುಖ್ಯೋಪಾಧ್ಯಾಯ ಯಶೋಧರ ನಾರಾಲು, ಎಸ್ ಡಿ ಎಂ ಸಿ ಅಧ್ಯಕ್ಷ ಧನಂಜಯ ಶೆಟ್ಟಿ, 1997 – 98 ಬ್ಯಾಚ್ ನ ಕಿರಣ್ ಎಚ್ ಮುಕ್ಕೂರು, ಕೆ.ವಿ.ಜಿ ಲಾ ಕಾಲೇಜಿನ ಉಪನ್ಯಾಸಕಿ ಅರ್ಚನಾ ಉಪಸ್ಥಿತರಿದ್ದರು.

ಸಭೆಯಲ್ಲಿ ರಜತ ವರ್ಷ ಆಚರಿಸಿಕೊಂಡ ವಿದ್ಯಾರ್ಥಿಗಳ ಶಿಕ್ಷಕರುಗಳಾದ ಬಿ. ವಿ ಶಗ್ರಿತ್ತಾಯ, ಜತ್ತಪ್ಪ ಸರ್, ಶಿವರಾಮ ಶಾಸ್ತ್ರಿ, ನಾರಾಯಣ ಭಟ್, ಪುರಂದರ ನಾರಾಯಣ, ಕಲಾವತಿ, ಯಶೋಧರ ನಾರಾಲು, ಶ್ರೀನಿವಾಸ ರೈ, ಮಾಲತಿ, ಕೃಷ್ಣಪ್ಪ ಮೂಲ್ಯ, ಕೆ.ವಿ ಶರ್ಮ, ಪದ್ಮಯ್ಯ ಗೌಡ ಕಾಯಾರ ಇವರುಗಳನ್ನು ಫಲ, ಪುಷ್ಪ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಲೊಕೇಶ್ ತಂಟೆಪ್ಪಾಡಿ, ಶಿವರಾಮ ಕಜೆಮೂಲೆ, ಸೌಭಾಗ್ಯ ಸೀತಾ, ಮುರಳೀಕೃಷ್ಣ, ಪ್ರಶಾಂತ್ ರೈ ಕುಲೈತೋಡಿ, ಅರ್ಚನಾ ಅನಿಸಿಕೆ ವ್ಯಕ್ತಪಡಿಸಿದರು.
ಬಾಳಿಲ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಯಶೋಧರ ಅವರು ಸ್ವಾಗತಿಸಿ ಲೊಕೇಶ್ ತಂಟೆಪ್ಪಾಡಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕ ಸಹನಾ ಬಿ ಬಿ ವಂದಿಸಿದರು. ಶಿಕ್ಷಕರುಗಳಾದ ಲೊಕೇಶ್ ಬೆಳ್ಳಿಗೆ ಹಾಗೂ ವೆಂಕಟೇಶ್ ಕುಮಾರ್ ಯು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here