ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

 

 

 

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.26 ರಿಂದ ಪ್ರಾರಂಭಗೊಂಡಿದ್ದು ಅ.04 ರವರೆಗೆ ನಡೆಯಲಿದೆ.
ಪ್ರತೀ ದಿನ ಬೆಳಿಗ್ಗೆ ,ಮಧ್ಯಾಹ್ನ ಮತ್ತು ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ನಡೆಯುತ್ತಿದೆ.
ದುರ್ಗಾದೇವಿ ಸನ್ನಿಧಿಯಲ್ಲಿ ದುರ್ಗಾಪೂಜೆ
ಮತ್ತು ಗೆಳೆಯರ ಬಳಗ ದೇರಾಜೆ ಮತ್ತು ಶ್ರೀ ಗುರುದೇವ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಪ್ರತೀ ದಿನ ನಡೆಯುತ್ತಿದೆ.

ಅ.04 ರಂದು ಮಂಗಳವಾರ ಆಯುಧ ಪೂಜೆ ನಡೆಯಲಿದೆ.
ಅ.05 ವಿಜಯ ದಶಮಿ ದಿನದಂದು ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ.ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ತಿಳಿಸಿದ್ದಾರೆ.