ಗುತ್ತಿಗಾರಿನ ಕು ಸಮೀಕ್ಷಾಳ ಚಿಕಿತ್ಸೆಗಾಗಿ ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲದ ಸದಸ್ಯರು ಹಾಗೂ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಶ್ರೀನಿವಾಸ ಮತ್ತು ತೀರ್ಥೆಶ್ ವೇಷ ಧರಿಸಿ ನಿಧಿ ಸಂಗ್ರಹ ,ಅವರೊಂದಿಗೆ ಸದಸ್ಯರಾದ ವಿನಯ ಕುಮಾರ್ ಮತ್ತು ದೀಪಕ್ ಪಾಟಾಜೆ ಸಹಕರಿಸಿರುತ್ತಾರೆ.ಒಟ್ಟು 58,000 ರೂಪಾಯಿ ಆರೋಗ್ಯ ನಿಧಿಯನ್ನು ಕು ಸಮೀಕ್ಷಾಳ ಮನೆಯಲ್ಲಿ ಹೆತ್ತವರ ಸಮ್ಮುಖದಲ್ಲಿ ಅ.2 ರಂದು ಹಸ್ತಾಂತರ ಮಾಡಲಾಯಿತು ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು ಪೂರ್ವಾಧ್ಯಕ್ಷರಾದ ದಿಲೀಪ್ ಬಾಬ್ಲಿಬೆಟ್ಟು ,ದಿನೇಶ್ ಪಂಜದಬೈಲು , ಸದಸ್ಯರಾದ ಶ್ರೀನಿವಾಸ, ತೀರ್ಥೇಶ್,ವಿನಯ ಕುಮಾರ್, ಬಾಲಕೃಷ್ಣ,ದೀಪಕ್, ದೇವಿಪ್ರಸಾದ್,ದೀಕ್ಷಿತ್ . ಉಪಸ್ಥಿತರಿದ್ದರು