ಹಿರಿಯ ಸಹಕಾರಿ ಪಿ.ಬಿ.ದಿವಾಕರ ರೈ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ

0

 

ಸುಳ್ಯ ಯುವಜನ ಸಂಯುಕ್ತ ಮಂಡಳಿ ಹಾಗು ಯುವಜನ ಸೇವಾ ಸಂಸ್ಥೆ ವತಿಯಿಂದ ನೀಡುವ ಗಾಂಧಿಸ್ಕೃತಿ ಪ್ರಶಸ್ತಿಯನ್ನು ಹಿರಿಯ ಸಹಕಾರಿ ಪಿ.ಬಿ.ದಿವಾಕರ ರೈ ಅವರಿಗೆ ಪ್ರದಾನ ಮಾಡಲಾಯಿತು.

ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದಂದು ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಗಾಂಧಿ ಸ್ಮೃತಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ. ಆರ್. ಗಂಗಾಧರ ಅವರು ಪಿ.ಬಿ. ದಿವಾಕರ ರೈ ಯವರ ಸೇವೆಯ ಬಗ್ಗೆ ಮತ್ತು ಗಾಂಧಿ ಚಿಂತನೆಯ ಕುರಿತು ಮಾತನಾಡಿದರು. ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿಯ ಓರ್ವ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಬಿ ದಿವಾಕರ ರೈ ಯವರ ಪರಿಚಯಗೈದರು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ ಸ್ವಾಗತಿಸಿದರು. ಯುವಜನ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಂಜಯ್ ನೆಟ್ಟಾರು ವಂದಿಸಿದರು. ಯುವಜನ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಕೆ.ಮಹಮ್ಮದ್ ಹಾಗು ಯುವಜನ ಸಂಯುಕ್ತ ಮಂಡಳಿಯ ಮಾಜಿ ಅಧ್ಯಕ್ಷ ದಯಾನಂದ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭಕ್ಕೆ ಮೊದಲು ಸುನಾದ ಸಂಗೀತ ಶಾಲೆಯ ವಿದ್ವಾನ್ ಕಾಂಚನ ಎ. ಈಶ್ವರ್ ಭಟ್ – ಶಿಷ್ಯರಿಂದ ಭಕ್ತಿಗಾನ ಸುಧೆ ನಡೆಯಿತು.

 

LEAVE A REPLY

Please enter your comment!
Please enter your name here