ಕಲ್ಲುಗುಂಡಿಯಲ್ಲಿ ಮಹಾವಿಷ್ಣು ಟಯರ್ ಶಾಪ್ ಶುಭಾರಂಭ

0
155

 

ಸಂಪಾಜೆ ಗ್ರಾಮ ಕಲ್ಲುಗುಂಡಿಯ ರೋಯಲ್ ವಾಣಿಜ್ಯ ಸಂಕೀರ್ಣ ಸುಳ್ಯಕೋಡಿಯಲ್ಲಿ ಚೆಂಬು ನಿವಾಸಿ ಪದ್ಮ ಎಂಬವರ ಮಾಲಕತ್ವದ ಮಹಾವಿಷ್ಣು ಟಯರ್ ಶಾಪ್ ಅ.೧ರಂದು ಶುಭಾರಂಭಗೊಂಡಿತು. ಸಂಸ್ಥೆಯಲ್ಲಿ ಪೂಜಾ ಕಾರ್ಯಗಳನ್ನು ನರಸಿಂಹ ಭಟ್‌ರವರ ಪೌರೋಹಿತ್ಯದಲ್ಲಿ ನಡೆಯಿತು.

ಕಲ್ಲುಗುಂಡಿಯ ಕೆ.ವಿ. ಮಂಜುನಾಥ್ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಲ್ಲುಗುಂಡಿ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಮಾಜಿ ಅಧ್ಯಕ್ಷರುಗಳಾದ ಜನಾರ್ಧನ ದೋಳ, ಶಾಂತಪ್ಪ , ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ, ಸಿ.ಇ.ಒ. ಆನಂದ ಬಾಲೆಂಬಿ, ನಿರ್ದೇಶಕ ಆದಂ ಸಂಟ್ಯಾರ್, ದಯಾನಂದ ಪಣೆಡ್ಕ, ಸಂಪಾಜೆ ಸಹಕಾರಿ ಸಂಘದ ಸಿಇಒ ವೀರೇಂದ್ರ ಜೈನ್, ಚೆಂಬು ಗ್ರಾ.ಪಂ. ಸದಸ್ಯರುಗಳಾದ ತೀರ್ಥರಾಮ ಪೂಜಾರಿಗದ್ದೆ, ರಮೇಶ್ ಹುಲ್ಲುಬೆಂಕಿ, ಶ್ರೀಧರ ಮಾದೆಪಾಲು, ಪೂರ್ಣಿಮಾ ಟೆಕ್ಸ್‌ಟೈಲ್ಸ್‌ನ ಬಿ.ಆರ್. ಪದ್ಮಯ್ಯ, ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ, ಕಲ್ಲುಗುಂಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕಿಶೋರ್ ಪಣೆಡ್ಕ, ತೆಕ್ಕಿಲ್ ಸಂಸ್ಥೆಯ ಮಾಲಕ ಟಿ.ಎಂ. ಶಹೀದ್ ಮೊದಲಾದವರು ಇದ್ದರು.

 

LEAVE A REPLY

Please enter your comment!
Please enter your name here