ಪಂಜ : ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ

0

 

ಪಂಜ ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಅಂಗವಾಗಿ ದತ್ತು ನಿಧಿ ಸ್ಥಾಪನೆ ಮತ್ತು ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮವು ಅ.2ರಂದು ಪಾಂಡಿಗದ್ದೆ ದ.ಕ ಜಿ. ಪ.ಸ.ಕಿ. ಪ್ರಾ. ಶಾಲೆಯಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷ ಪುರುಷೋತ್ತಮ
ದಂಬೆಕೋಡಿ ವಹಿಸಿದ್ದರು. ಪಾಂಡಿಗದ್ದೆ ಎಸ್.ಡಿ ಎಂ. ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಮುಖ್ಯ ಅತಿಥಿಯಾಗಿ ಮಾತನಾಡಿ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ಯಶೋಧರ ಕಳಂಜ ಮಕ್ಕಳಿಗೆ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು ಮತ್ತು ಶುಭ ಹಾರೈಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ನಿರ್ದೇಶಕ ಚೀನಪ್ಪ ಕಾಣಿಕೆ ಪ್ರಾಸ್ತಾವಿಕ ಮಾತನಾಡಿ,ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿದರು. ಕೋಶಾಧಿಕಾರಿ ಕರುಣಾಕರ ಎಣ್ಣೆಮಜಲು. ಉಪಸ್ಥಿತರಿದ್ದರು.

 


ಪಾಂಡಿಗದ್ದೆ ದ.ಕ ಜಿ. ಪ.ಸ.ಕಿ. ಪ್ರಾ. ಶಾಲೆಗೆ ಲಯನ್ಸ್ ಕ್ಲಬ್ ವತಿಯಿಂದ ದತ್ತು ನಿಧಿಯನ್ನು ನೀಡಲಾಯಿತು ಈ ಹಣವನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಡಿಪೋಸಿಟ್ ಇಟ್ಟು ಅದರ ಬಡ್ಡಿ ಹಣದಿಂದ ಗರಿಷ್ಠ ಅಂಕಗಳಿಸಿದ ಮಕ್ಕಳಿಗೆ ನಗದು ರೂಪದಲ್ಲಿ ಹಣವನ್ನು ನೀಡಲಾಗುವುದು. ಲಯನ್ಸ್ ಕ್ಲಬ್ ಸದಸ್ಯರಾದ ಶಶಿಧರ ಪಳಂಗಾಯ, ಕುಸುಮಾದರ ಕೆಮ್ಮೂರು, ಸುರೇಶ್ ಕುಮಾರ್ ನಡ್ಕ, ವಾಸುದೇವ ಮೇಲ್ಪಾಡಿ, ತುಕಾರಾಮ ಏನೆಕಲ್ಲು ,ಬಾಲಕೃಷ್ಣ ಮೂಲೆಮನೆ, ಆನಂದ ಜಳಕದ ಹೊಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪರೀಕ್ಷಿತ ಕಂಬಳ ಪ್ರಾರ್ಥಿಸಿದರು. ಸ.ಹಿ.ಪ್ರಾ.ಶಾಲೆಯ ಅತಿಥಿ ಶಿಕ್ಷಕಿ ಶ್ರೀಮತಿ ವಿಂದ್ಯಾ ಪೂಜಾರಿಮನೆ ವೇದಿಕೆಗೆ ಅಹ್ವಾನಿಸಿದರು. ಕಾರ್ಯದರ್ಶಿ ನಾಗೇಶ್ ಕಿನ್ನಿಕುಮೇರಿ ವಂದಿಸಿದರು.