ಎಡಮಂಗಲ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

 

 

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಾನಧ್ಯದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆ.26 ರಂದು ನವರಾತ್ರಿ ಉತ್ಸವ ಪ್ರಾರಂಭಗೊಂಡಿತು. ದಿನ ನಿತ್ಯ ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್‍ಯಕ್ರಮ, ಪ್ರತೀ ದಿನ ವಿವಿಧ ಮೂಲೆಗಳಿಂದ ಆಗಮಿಸಿದ ಭಜಕರಿಂದ ಕುಣಿತ ಹಾಗೂ ಭಜನಾ ಸೇವೆ ನಡೆಯಿತು. ಮುರಾಜೆ ಅಯ್ಯಪ್ಪ ಭಜನಾ ಮಂಡಳಿ, ಮಾತೃಶಕ್ತಿ ಬಾಲ ಸಂಸ್ಕಾರ ಭಜನಾ ತಂಡ ಕಡಬ, ಸಿದ್ಧಿ ವಿನಾಯಕ ಭಜನಾ ಮಂಡಳಿ ದೊಡ್ಡಕೊಪ್ಪ, ಸ್ಥಳೀಯ ಭಕ್ತಾದಿಗಳಿಂದ, ಜಯದುರ್ಗಾ ಭಜನಾ ಮಂಡಳಿ ಕಡಬ, ಯುವವಾಹಿನಿ ಭಜನಾ ಮಂಡಳಿ ಕಡಬ ಇವರಿಂದ ಕುಣಿತ ಭಜನೆ ನಡೆಯಿತು. ಪ್ರತೀ ದಿನ ದೇವಾಲಯದಲ್ಲಿ ರಂಗ ಪೂಜೆ, ಮಹಾಪೂಜೆ ಸೇವೆಗಳು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ನೂಚಿಲ ಕುಟುಂಬದ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲರವರ ತಂಡ ವೈಧಿಕ ಕಾರ್‍ಯಕ್ರಮ ನಡೆಸಿದರು.