ಸುಬ್ರಮಣ್ಯ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಗ್ರಾಮ ಸಭೆ

0

 

ಸುಬ್ರಮಣ್ಯ ಗ್ರಾಮ ಪಂಚಾಯತ್ ನ ಕುಮಾರಧಾರ ಸಭಾಂಗಣದಲ್ಲಿ ಗ್ರಾಮ ಪಂಚಾಯತದ ಅಧ್ಯಕ್ಷೆ ಶ್ರೀಮತಿ ಲಲಿತ ಜಿ.ಗುಂಡಡ್ಕ ರವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆ ಇಂದು ನಡೆಯಿತು. ಗಾಂಧಿ ಭಾವಚಿತ್ರಕ್ಕೆಜ್ಯೋತಿ ಬೆಳಗಿಸಿ ಪುಷ್ಪಾರ್ಶಚನೆಯೊಂದಿಗೆ ಗ್ರಾಮ ಪಂಚಾಯತ್ ಅದ್ಯಕ್ಷರು ಗ್ರಾಮ ಸಭೆಗೆ ಚಾಲನೆ ನೀಡಿದರು.

ಸಭೆಯಲ್ಲಿ ಹಾಜರಿದ್ದ ಸಂಘ ಸಂಸ್ಥೆ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಗಾಂಧಿ ಭಾವ ಚಿತ್ರಕ್ಕೆ ಪುಷ್ಪ ಗೌರವ ಸಮರ್ಪಿಸಿದರು. ಮುಖ್ಯ ಅತಿಥಿಗಳಾಗಿ ಭಾವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರಂಗಯ್ಯ ಶೆಟ್ಟಿಗಾರ್ ಹಾಗೂ ಜೇಸಿ ಗೌರವಾಧ್ಯಕ್ಷರಾದ ವಿಶ್ವನಾಥ ನಡುತೋಟ ರವರು ಗಾಂಧಿ ಜಯಂತಿಯ ಮಹತ್ವ ಹಾಗೂ ವಿಕೇಂದ್ರೀಕ್ರತ ಆಡಳಿತದ ಬಗ್ಗೆ ಗಾಂಧಿ ದೃಷ್ಟಿ ಕೋನದ ಕುರಿತು ಮಾತನಾಡಿದರು.

ಗ್ರಾಮ ಸಭೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಪಿಡಿಓ ಶೇಖರ್ ಯು.ಡಿ ಗ್ರಾಮಸಭೆಯುಲ್ಲಿ ಗ್ರಾಮ ಪಂಚಾಯಿತ್ ನ ಐದು ವರ್ಷಗಳ ದೂರದೃಷ್ಟಿ ಯೋಜನೆ ಗ್ರಾಮ ಪಂಚಾಯತ್ ನೈರ್ಮಲ್ಯ ಯೋಜನೆ, ಏಕ ಬಳಕೆಯ ಪ್ಲಾಸ್ಟಿಕ್ ಗಳ ನಿಷೇಧ ಮತ್ತು ಸ್ವಚ್ಛತಾ ಪ್ರತಿಜ್ಞೆ ವಿಧಿಗಳ ಕುರಿತು ಮಾಹಿತಿ ನೀಡಿದರು. ವಿವಿಧ ವಿಷಯಗಳ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಿ ಅವಲೋಕನದ ನಂತರ ಸಭೆಯಲ್ಲಿ ಸ್ವಚ್ಚತಾ ಪ್ರತಿಜ್ಞಾ ವಿಧಿ ಬೋಧನೆಯನ್ನು ಗ್ರಾಮ ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯಲ್ಲಿ
ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಭಟ್ , ಸದಸ್ಯರಾದ ವೆಂಕಟೇಶ್ ಎಚ್.ಎಲ್., ಮಾಜಿ ಉಪಾಧ್ಯಕ್ಷರಾದ ರಾಜೇಶ್ ಎನ್.ಏಸ್, ಸದಸ್ಯ ನಾರಾಯಣ ಅಗ್ರಹಾರ ಮತ್ತಿತರರು ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರಾದ ಶ್ರೀಮತಿ ಸುಜಾತ ಗಣೇಶ್, ಎಂಬಿಕೆ ಹೇಮಾವತಿ ಸಂಜೀವಿನಿ ಒಕ್ಕೂಟದ ಪಧಾಧಿಕಾರಿಗಳು ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಘನತ್ಯಾಜ್ಯ ಘಟಕ ಸಿಬ್ಬಂದಿಗಳು ಮತ್ತು ಗ್ರಾಮಪಂಚಾಯಿತಿಗಳು ಮತ್ತು ವರ್ತಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು . ಮೋನಪ್ಪ ಡಿ.ಕಾರ್ಯಕ್ರಮ ನಿರೂಪಿಸಿದರು ವೆಂಕಟೇಶ್.ಎಚ್.ಎಲ್.ಸ್ವಾಗತಿಸಿ , ಸದಸ್ಯೆ ಶ್ರೀಮತಿ ಭಾರತಿ ದಿನೇಶ್ ವಂದಿಸಿದರು. ಲಯನ್ಸ ಕ್ಲಬ್ ಪ್ರಾಯೋಕತ್ವದಲ್ಲಿ ಸ್ವಚ್ಚತಾಹೀ ಸೇವಾ ಸ್ವಚ್ಚ ಶ್ರಮದಾನ ಸುಬ್ರಹ್ಮಣ್ಯ ಪೇಟೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here