ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಕಛೇರಿ ಉದ್ಘಾಟನೆ ಹಾಗೂ ಕೃಷಿ- ಬದುಕು ವಿಚಾರ ವಿನಿಮಯ ಕಾರ್ಯಕ್ರಮ

0

 

ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಕಛೇರಿ ಉದ್ಘಾಟನೆ ಹಾಗೂ ಕೃಷಿ- ಬದುಕು ವಿಚಾರ ವಿನಿಮಯ ಕಾರ್ಯಕ್ರಮ
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಲೋಲಾಜಾಕ್ಷ ಗೌಡ ಭೂತಕಲ್ಲು ರವರ ಆಧ್ಯಕ್ಷತೆಯಲ್ಲಿ ಪೈಚಾರಿನಲ್ಲಿ ಸೆ. 1 ರಂದು ನೆರವೇರಿತು.

 

ಕಛೇರಿ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ, ಚಿಂತಕ ತೇಜಕುಮಾರ್ ಕುಡೆಕಲ್ಲು ನೇರವೇರಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ
ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಾರಂಪರಿಕ ಕೃಷಿ ಹಾಗೂ ಆಧುನಿಕ ಕೃಷಿ ವಿಷಯದ ಕುರಿತು ಸಮಗ್ರ ಮಾಹಿತಿಯನ್ನು ಸಾಹಿತಿ ಎ.ಕೆ.ಹಿಮಕರ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ,
ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ,ಜಿಲ್ಲಾ ಯುವ ರೈತ ಘಟಕದ ಗೌರವ ಅಧ್ಯಕ್ಷ ಸುರೇಂದ್ರ ಕೋರ್ಯ, ಪ್ರಧಾನ ಕಾರ್ಯದರ್ಶಿ ಶಿವಾನಂದ್ ಬಿಸಿರೋಡ್. ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ,ಸುದರ್ಶನ್ ಕೊಯಿಂಗೋಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಭೆಯಲ್ಲಿ ತಾಲೂಕು ಕೋಶಾಧಿಕಾರಿ ದೇವಪ್ಪ ಗೌಡ ಕುಂದಲ್ಪಾಡಿ, ಉಪಾಧ್ಯಕ್ಷ ತೀರ್ಥರಾಮ ಗೌಡ ಉಳುವಾರು, ಸಂಚಾಲಕ ಸೆಬಾಸ್ಟಿಯನ್ ಮಡಪ್ಪಾಡಿ, ಜತೆ ಕಾರ್ಯದರ್ಶಿ ಚೆನ್ನಕೇಶವ, ಮಂಜುನಾಥ್ ಮಡ್ತಿಲ, ಸಂಪಾಜೆ ಗ್ರಾಮ ಘಟಕದ ಅಧ್ಯಕ್ಷ ವಸಂತ ಪೆಲತ್ತಡ್ಕ ಸೇರಿದಂತೆ ಹಲವಾರು ಗ್ರಾಮ ಘಟಕದ ಪದಾಧಿಕಾರಿಗಳು ಹಾಗೂ ಸಕ್ರಿಯ ಕಾರ್ಯಕರ್ತರು ಭಾಗವಹಿಸಿದ್ದರು.

ತಾಲೂಕು ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕಾರ್ಯಕ್ರಮ‌ ನಿರ್ವಹಿಸಿದರು.

LEAVE A REPLY

Please enter your comment!
Please enter your name here