ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದಲ್ಲಿ ಶಾರದಾ ಪೂಜೆ ಮತ್ತು ಭಜನಾ ಕಾರ್ಯಕ್ರಮ

0

 

 

ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ಕಟ್ಟಡದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಶ್ರೀ ಶಾರದಾ ಮಾತೆಯ ಪೂಜೆಯು ಅ‌.2 ರಂದು ನಡೆಯಿತು. ಬೆಳಗ್ಗೆ ಮಹಿಳಾ ಮಂಡಲದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದು ಮಧ್ಯಾಹ್ನ ಮಹಾ ಮಂಗಳಾರತಿಯಾಗಿ ಪ್ರಸಾದ ವಿತರಣೆಯಾಯಿತು.

ಈ ಸಂದರ್ಭದಲ್ಲಿ ‌ಮಹಿಳಾ ಮಂಡಲದ ಅಧ್ಯಕ್ಷೆ ಯಶೋಧ, ಕಾರ್ಯದರ್ಶಿ ಜಲಜಾಕ್ಷಿ ರೈ ಆಲೆಟ್ಟಿ,ಖಜಾಂಜಿ ಬೇಬಿ ಆಲೆಟ್ಟಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.