ಸಂಪಾಜೆ ಪಯಸ್ವಿನಿ ಯುವಕ ಸಂಘದಿಂದ ಸ್ವಚ್ಛತೆ

0

ಪಯಸ್ವಿನಿ ಯುವಕ ಸಂಘ (ರಿ) ಸಂಪಾಜೆ ಕೊಡಗು ಇದರ ವತಿಯಿಂದ ಸಂಪಾಜೆ ಗ್ರಾಮದ ದೇವಜನ ಲಿಂಗಪ್ಪ ಇವರ ಮನೆಯಲ್ಲಿ ದೈವಜ್ಞರ ಸಲಹೆ ಮೇರೆಗೆ ಕೆಲವು ದೈವ ಸಾನಿಧ್ಯಗಳು ಪ್ರತಿಷ್ಠೆಗೊಳ್ಳಲಿದ್ದು ದೈವ ಸಾನಿಧ್ಯಗಳಾದ
ಶ್ರೀ ಚಾಮುಂಡಿ ಕಟ್ಟೆ, ಶ್ರೀ ಗುಳಿಗ ಕಟ್ಟೆ, ಶ್ರೀ ಪಂಜುರ್ಲಿ ಕಟ್ಟೆ, ಶ್ರೀ ಕಲ್ಲುರ್ಟಿ ಕಟ್ಟೆಯ ಕೆಲಸ ಆರಂಭಗೊಂಡಿದ್ದು. ಕಟ್ಟೆಯ ಕೆಲಸದ ಮೊದಲ ಹೆಜ್ಜೆಯಾಗಿ ಕಟ್ಟೆಯ ಕೆಲಸಕ್ಕೆ ಕೆಂಪು ಕಲ್ಲು ಹೊರುವ ಕೆಲಸವನ್ನು ಪಯಸ್ವಿನಿ ಯುವಕ ಸಂಘದ ಸದಸ್ಯರು ಶ್ರಮದಾನದ ಮೂಲಕ ನೆರವೇರಿಸಿದರು. ಈ ಶ್ರಮದಾನ ಕಾರ್ಯದಲ್ಲಿ ಸಂಘದ ಸರ್ವ ಸದಸ್ಯರುಗಳು ಹಾಗೂ ಮನೆಯ ಸದಸ್ಯರು ಪಾಲ್ಗೊಂಡು ಶ್ರಮದಾನವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here