ಸುಬ್ರಹ್ಮಣ್ಯ ಎಸ್ ಪಿ ಯು ನಲ್ಲಿ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ

0
106

 

ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನಲ್ಲಿ ಶಿಕ್ಷಕ- ರಕ್ಷಕ ಸಂಘದ ವತಿಯಿಂದ 52ನೇ ವರ್ಷ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ ಅ.2 ರಂದು ನಡೆಯಿತು. ಪುರೋಹಿತರು ಸಂಕಲ್ಪ ನೆರವೇರಿಸಿ ಪೂಜಾ ವಿದಿ ವಿಧಾನ ಪೂರೈಸಿದರು. ಮದ್ಯಾಹ್ನ ಮಹಾ ಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು.
ಈ ಮೊದಲು ಕಲಾವಿದ ಗಣೇಶ್ ಪರ್ವತಮುಖಿ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು.ಕಲಾವಿದ ವರ್ಷಿತ್ ತಬಲ ಸಹಕಾರ ನೀಡಿದರು.ಬಳಿಕ ಹಿರಿಯ ವಿದ್ಯಾರ್ಥಿ ರಾಜೇಶ್ ನೇತೃತ್ವದಲ್ಲಿ 25 ಕ್ಕೂ ಅಧಿಕ ಮಂದಿ ಕಲಾವಿದರು ಹುಲಿವೇಷ ಕುಣಿತ ಪ್ರದರ್ಶಿಸಿದರು.
ಸಾಂಪ್ರದಾಯಿಕ ಮಂಟಪ :
ಶಾರದಾ ಮತ್ತು ಸತ್ಯನಾರಾಯಣ ಪೂಜೆಗೆ ಹಿರಿಯ ವಿದ್ಯಾರ್ಥಿ ಕಲಾವಿದ ಚಂದ್ರಶೇಖರ ಮಲ್ಲಿಗೆಮಜಲು ನೇತೃತ್ವದಲ್ಲಿ ಸಮಂತ್ ಮತ್ತು ಅನ್ವಿತ್ ಸೇರಿದಂತೆ ವಿದ್ಯಾರ್ಥಿ ಕಲಾಕಾರರು ಬಾಳೆದಿಂಡಿನಿಂದ ಆಕರ್ಷಕ ಮಂಟಪ ತಯಾರಿಸಿದ್ದರು.
ಈ ಸಂದರ್ಭ ಪ್ರಾಂಶುಪಾಲ ಸೋಮಶೇಖರ್ ನಾಯಕ್, ಪ್ರೌಢಶಾಲಾ ಮುಖ್ಯ ಗುರು ಕೆ.ಯಶವಂತ ರೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವರಾಮ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಉಪಾಧ್ಯಕ್ಷ ಲೋಕೇಶ್ ಬಿ.ಎನ್,.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ, ನಿವೃತ್ತ ಉಪನ್ಯಾಸಕ ಡಾ.ಕೆ.ಎಸ್. ಎನ್.ಉಡುಪ, ಉಪಪ್ರಾಂಶುಪಾಲೆ ಜಯಶ್ರೀ. ವಿ.ದಂಬೆಕೋಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರೇಖಾರಾಣಿ ಸೋಮಶೇಖರ್, ಹಿರಿಯ ಸಹ ಶಿಕ್ಷಕ ಎಂ.ಕೃಷ್ಣ ಭಟ್, ಕಚೇರಿ ಅಧೀಕ್ಷಕಿ ಜಯಂತಿ ಜಯಪ್ರಕಾಶ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here