ಆಲೆಟ್ಟಿ ಸದಾಶಿವ ದೇವಳದಲ್ಲಿ ಆಯುಧ ಪೂಜೆ ಮತ್ತು ಭಾರತ ಮಾತಾ ಪೂಜನಾ ಕಾರ್ಯಕ್ರಮ

0

 

 

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿಯ 9 ನೇ ದಿನದಂದು ವಿಶೇಷವಾಗಿ ಆಯುಧ ಪೂಜಾ ಕಾರ್ಯಕ್ರಮ ಅ.4 ರಂದು ನಡೆಯಿತು. ದೇವಳದ ಪ್ರದಾನ ಅರ್ಚಕ ಹರ್ಷಿತ್ ಬನ್ನಿಂತಾಯ ಮತ್ತು ಅರ್ಚಕ ಸುಬ್ರಾಯ ಭಟ್ ವೈದಿಕ ಕಾರ್ಯಕ್ರಮ ನೆರವೇರಿಸಿದರು.


ವಿಶ್ವ ಹಿಂದೂ ಪರಿಷತ್ ಭಜರಂಗದಳ ಆಲೆಟ್ಟಿ ಶಿವ ಶಕ್ತಿ ಶಾಖೆಯ ವತಿಯಿಂದ
ಭಾರತ ಮಾತೆ ಪೂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಸ್ತ್ರಾಸ್ತ್ರ ಪೂಜೆಯನ್ನು ನೆರವೇರಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ವಾಹನ ಪೂಜೆಯು ನಡೆಯಿತು. ದೇವಳದ ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ ಬಡ್ಡಡ್ಕ, ಸದಸ್ಯರಾದ ಹರಿಪ್ರಸಾದ್ ಗಬ್ಬಲ್ಕಜೆ, ಸತೀಶ್ ಕುಂಭಕ್ಕೋಡು, ಅಚ್ಚುತ ಮಣಿಯಾಣಿ ಆಲೆಟ್ಟಿ, ಪ್ರಖಂಡ ಶಾಖೆಯ ಅಧ್ಯಕ್ಷ ನಾರಾಯಣ ರೈ ಆಲೆಟ್ಟಿ, ರೂಪಾನಂದ ಗುಂಡ್ಯ, ಸೇ.ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ನಿವೃತ್ತ ಶಿಕ್ಷಕ ಕೊರಗಪ್ಪ ಗೌಡ ಕುಂಚಡ್ಕ, ಪಿ.ಡಿ.ಒ ದಯಾನಂದ ಪತ್ತುಕುಂಜ, ಜಂಟಿ ಸಮಿತಿಯ ಸದಸ್ಯರು, ಭಜನಾ ಸಂಘ ದ ಸದಸ್ಯರು ಉಪಸ್ಥಿತರಿದ್ದರು. ಪೂಜೆಯಾದ ನಂತರ ವಾಹನ ಮೆರವಣಿಗೆ ನಾರ್ಕೋಡು ಸದಾಶಿವ ದ್ವಾರದ ತನಕ ಸಾಗಿತು.