ಕೊಲ್ಲಮೊಗ್ರು:  ಮತ್ತೆ ಸಂಪರ್ಕ ಕಡಿದುಕೊಂಡ ತಾತ್ಕಾಲಿಕ ಸೇತುವೆ

0

ಕೊಲ್ಲಮೊಗ್ರದ ಕಡಂಬಳ ಬಳಿ ಆಗಷ್ಟ್ ಆರಂಭದ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಯನ್ನು  ಇತ್ತೀಚೆಗೆ ತಾತ್ಕಾಲಿಕವಾಗಿ ಮೋರಿ ಹಾಕಿ ಮುಚ್ಚಿ ಸಂಪರ್ಕ ಕಲ್ಪಿಸಲಾಗಿತ್ತು. ಇಂದು ಸುರಿದ ಭಾರೀ ಮಳೆಗೆ ಹೆಚ್ಚು ನೀರು ಹರಿದು ಮೋರಿ ಮೇಲೆ ಹಾಕಿದ ಮಣ್ಣು ಕೊಚ್ಚಿ ಹೋಗಿದ್ದು, ಮೋರಿಯು ಮುರಿದು ಹೋಗಿದೆ.  ಇದರಿಂದಾಗಿ  ಮತ್ತೆ  ರಸ್ತೆ ಸಂಪರ್ಕ ಕಡಿದುಕೊಂಡಿರುವುದಾಗಿ ವರದಿಯಾಗಿದೆ.