ಸಮೀಕ್ಷಾಳ ಚಿಕಿತ್ಸೆಗಾಗಿ ಊರವರಿಂದ ಧನ ಸಹಾಯ

0
370

 

ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ ಗುತ್ತಿಗಾರಿನ ಸಮೀಕ್ಷ ಳ ಚಿಕಿತ್ಸೆಗಾಗಿ, ಊರರವರಿಂದ ಸಂಗ್ರಹವಾದ ಸಹಾಯಧನ ವನ್ನು ಮಗುವಿನ ಮನೆಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಮೀಕ್ಷ ಳ ಮನೆಯವರು, ಮಾಜಿ ಜಿ.ಪಂ. ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮಾಜಿ ಸೈನಿಕರಾಗಿದ್ದು ಈಗ ಕೃಷಿಕರಾಗಿರುವ ಗಂಗಾಧರ ದಂಬೆಕೋಡಿ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ, ಹಾಲಿ ಸದಸ್ಯ ಪದ್ಮನಾಭ ದಂಬೆಕೋಡಿ, ಎಲ್. ಡಿ. ಬ್ಯಾಂಕ್ ನ ಮಾಜಿ ನಿರ್ದೇಶಕ ಚಂದ್ರಶೇಖರ ಮೊಟ್ಟೆಮನೆ, ಸಚಿನ್ ಮೊಟ್ಟೆಮನೆ, ಗಂಗಾಧರ ಕೆದ್ಕಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here