ಅಡ್ಕಾರು ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ಚತುರ್ಥ ವರ್ಷದ ಶಾರದಾಂಬ ಉತ್ಸವ

0
95

 

ಸಂಜೆ ಶ್ರೀದೇವಿಯ ವೈಭವದ ಶೋಭಾಯಾತ್ರೆ

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ಚತುರ್ಥ ವರ್ಷದ ಶಾರದಾಂಬ ಉತ್ಸವವು ಅ.5ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಜರುಗುತ್ತಿದ್ದು, ಸಂಜೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ಜರುಗಲಿದೆ.
ಬೆಳಿಗ್ಗೆ ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ, ಶ್ರೀ ಶಾರದಾಂಬ ದೇವಿಯ ವಿಗ್ರಹ ಪ್ರತಿಷ್ಠೆ, ನಡೆಯಿತು.

 


ಬಳಿಕ ಬಾಲ ಸರಸ್ವತಿ ಹೋಮ, ಅಕ್ಷರಾಭ್ಯಾಸ, ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ಗೌರವಾಧ್ಯಕ್ಷ ರವಿನ್ ರಾಜ್ ಅಡ್ಕಾರುಪದವು, ಸಮಿತಿಯ ಅಧ್ಯಕ್ಷ ಯತೀಂದ್ರ ಅಡ್ಕಾರುಬೈಲು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್ ಅಡ್ಕಾರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಅಪರಾಹ್ನ ಧ್ವಜಾವತರಣದ ಬಳಿಕ ಶ್ರೀ ಶಾರದಾಂಬ ದೇವಿಯ ಶೋಭಾಯಾತ್ರೆಯು ಸಿಂಗಾರಿಮೇಳ ಮತ್ತು ಕುಣಿತ ಭಜನೆಯೊಂದಿಗೆ ಭಕ್ತಾದಿಗಳ ಸಮ್ಮುಖದಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿದೆ.

*ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಸಂಭ್ರಮದ ನವರಾತ್ರಿ ಉತ್ಸವ*
ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೆ. 27ರಂದು ಬೆಳಿಗ್ಗೆ ಕದಿರು ವಿನಿಯೋಗ, ನವಾನ್ನ ಭೋಜನ ಜರುಗಿತು. ನವರಾತ್ರಿ ಅಂಗವಾಗಿ ಸೆ.30ರಂದು ದೇವಾಲಯದಲ್ಲಿ ಶ್ರೀ ದುರ್ಗಾ ತ್ರಿಕಾಲ ಪೂಜೆ ಹಾಗೂ ಅ.4ರಂದು ವಿಶೇಷ ಆಯುಧಪೂಜೆ ಜರುಗಿತು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಸೇರಿದಂತೆ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here