ಬಾಳಿಲ: ಸಾರ್ವಜನಿಕ ಶ್ರೀ ಶಾರದೋತ್ಸವ – ಶಾರದೋತ್ಸವ ಪ್ರಶಸ್ತಿ ಪ್ರದಾನ

0

 

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 4 ಮತ್ತು 5ರಂದು ಬಾಳಿಲ ವಿದ್ಯಾಬೋಧಿನೀ ಹಿ. ಪ್ರಾ. ಶಾಲಾ ವಠಾರದಲ್ಲಿ ನಡೆಯುತ್ತಿದ್ದು, ಇಂದು ನಿವೃತ್ತ ಶಿಕ್ಷಕ ಸೀತಾರಾಮ ರಾವ್ ಕಡಬರವರಿಗೆ ಶ್ರೀ ಶಾರದೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ರಾವ್ ಯು.ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು. ಕರ್ನಾಟಕ ಹಿಂದೂ ಜಾಗರಣ ವೇದಿಕೆಯ ಬ. ಗಣರಾಜ ಭಟ್ ಕೆದಿಲ ಧಾರ್ಮಿಕ ಉಪನ್ಯಾಸ ನೀಡಿದರು. ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ. ಶಾಲಾ ನಿವೃತ್ತ ಶಿಕ್ಷಕ ಸೀತಾರಾಮ ರಾವ್ ಕಡಬ ಇವರಿಗೆ ರಾಮಚಂದ್ರ ಕೆದಿಲ ಸ್ಮರಣಾರ್ಥ ಶ್ರೀ ಶಾರದೋತ್ಸವ ಪ್ರಶಸ್ತಿಯನ್ನು ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ರಾವ್ ಕಡಬ ದಂಪತಿಗಳಿಗೆ ಶ್ರೀ ಶಾರದೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾರದಾ ದೇವಿಗೆ ಕರಿಮಣಿ ಸರ ಮತ್ತು ತಾಳಿಯನ್ನು ಸೇವಾ ರೂಪದಲ್ಲಿ ನೀಡಿದ ಎ.ಕೆ. ನಾಯ್ಕ್ ದಂಪತಿಗಳಿಗೆ ಗೌರವಾರ್ಪಣೆ ಮಾಡಲಾಯಿತು.

ಬಾಳಿಲ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ್, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ವಿಶ್ರಾಂತ ಅಧ್ಯಾಪಕ ಜೆ. ಸದಾಶಿವ ಭಟ್, ನಿವೃತ್ತ ಆರೋಗ್ಯ ಸಹಾಯಕ ಕೆ. ರಾಜೇಂದ್ರ ಪ್ರಸಾದ್ ಬಾಳಿಲ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷ ಶೇಷಪ್ಪ ಪರವ, ಕಾರ್ಯದರ್ಶಿ ಪವನ್ ರೈ ಅಗಲ್ಪಾಡಿ, ಮಹಿಳಾ ಸಮಿತಿಯ ಅಧ್ಯಕ್ಷೆ ಕಮಲ ಎಂ, ಕಾರ್ಯದರ್ಶಿ ಮಾಲಿನೀ ಪ್ರಸಾದ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ. ಸಾಧಕರಾದ ಪ್ರದೀಪ್ ಟಿ. ತೋಟ, ರಕ್ಷಾಂ ಎಂ. ಮುಪ್ಪೇರ್ಯ, ವರ್ಷಾ ಎಸ್. ರೈ ಬಾಳಿಲ, ನಿಧಿ ರೈ ದೇರಂಪಾಲು ಮತ್ತು ವಿಶೇಷ ಸಾಧನೆ ಮಾಡಿದ ಡಾ. ಶರಣ್ಯ ಸಿ. ಯವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಪ್ರತಿಭಾ ಪುರಸ್ಕಾರ ಈ ಸಂದರ್ಭದಲ್ಲಿ ನಡೆಯಿತು. ಶ್ರೀಮತಿ ಶೋಭ ಎ.ಕೆ‌. ನಾಯ್ಕ್ ಪ್ರಾರ್ಥಸಿದರು. ಪ್ರತಿಭಾ ಪುರಸ್ಕಾರ ಪಡೆದ ಡಾ. ಶರಣ್ಯ ಸಿ ಮತ್ತು ವರ್ಷಾ ಎಸ್. ರೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾಬೋಧಿನೀ ಪ್ರೌಢಶಾಲಾ ಶಿಕ್ಷಕ ಲೋಕೇಶ್ ಬೆಳ್ಳಿಗೆ ಸ್ವಾಗತಿಸಿ ಸಮಿತಿಯ ಸದಸ್ಯ ಈಶ್ವರ ವಾರಣಾಶಿ ವಂದಿಸಿದರು. ರಾಜೇಶ್ ಸುವರ್ಣ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಲಾಕ್ ಡೌನ್ ನಿಂದಾಗಿ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಲಭ್ಯವಾಗಲಿಲ್ಲ. ಪಾಸಾಗಿದ್ದಾರೆ ಅಷ್ಟೆ. ಎರಡು ವರ್ಷದಲ್ಲಿ ನಷ್ಟವಾದ ಶಿಕ್ಷಣವನ್ನು ಶ್ರಮಪಟ್ಟು ಪಡೆಯಬೇಕು – ಜೆ. ಸದಾಶಿವ ಭಟ್
ಪ್ರಪಂಚಕ್ಕೆ ಧರ್ಮವನ್ನು ಬೋಧಿಸಿದ ದೇಶ ಭಾರತ. ನಮಗೆ ಗೊತ್ತಿಲ್ಲದ ಹಾಗೆ ಸಂಸ್ಕಾರವನ್ನು ಪಡೆದುಕೊಂಡು ಬಂದಿರುವುದು ನಮ್ಮ ದೇವತಾರಾಧನೆಯಿಂದ. ಇನ್ನೊಬ್ಬರಲ್ಲಿ ದೇವರನ್ನು ಕಾಣುವ ದೇಶ ನಮ್ಮದು. ಅದಕ್ಕಾಗಿ ಭಾರತವನ್ನು ಜಗದಜನನಿ ಎಂದು ಪೂಜಿಸುತ್ತಾರೆ – ಬ. ಗಣರಾಜ ಭಟ್ ಕೆದಿಲ

LEAVE A REPLY

Please enter your comment!
Please enter your name here