ಪಂಜ: ಶ್ರೀ ಶಾರದೋತ್ಸವ – ಸಾಂಸ್ಕೃತಿಕ ಸಂಭ್ರಮ

0

 

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ
ಸಮಿತಿ-2022 ಇದರ ಆಶ್ರಯದಲ್ಲಿ ಪಂಜ ನಾಡ ಹಬ್ಬ ಶ್ರೀ ಶಾರದೋತ್ಸವವು ಅ.5 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರಗಿತು. ಆ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು , ಸಾಂಸ್ಕೃತಿಕ ಸಂಭ್ರಮ ಜರುಗಿತು.ಸಾಂಸ್ಕೃತಿಕ ಸಂಭ್ರಮದಲ್ಲಿ ಸವ್ಯ ಸಾಚಿ ಸುಭಾಷ್ ಪಂಜ ರವರ ನಿರ್ದೇಶನದಲ್ಲಿ ಶಾರದಾಂಬಾ ಕಲಾ ತಂಡ ಪ್ರಸ್ತುತಿಯ (ಐತಿಹಾಸಿಕ ಘಟನೆಗಳ ಅನಾವರಣ)ಹೊಸಕೆರೆ ಹೊನ್ನಮ್ಮ ಎಂಬ ನಾಟಕ, ವಿಶ್ವ ಕಲಾನಿಕೇತನ ಕಲ್ಚರಲ್ ಮತ್ತು ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ಗೊಂಡಿತು.‌ಸಂಜೆ ವೈಭವದ ಶೋಭಾಯಾತ್ರೆ ಜಲಸ್ತಂಭನ ನಡೆಯಲಿದೆ.