ಬೆಳ್ಳಾರೆಯಲ್ಲಿ ಭಕ್ತಿ,ಸಂಭ್ರಮದ ಶಾರದೋತ್ಸವ

0

ಶ್ರೀ ದೇವಿಯ ವೈಭವದ ಶೋಭಾಯಾತ್ರೆ

ಮನರಂಜಿಸಿದ ಕವಿರತ್ನ ಕಾಳಿದಾಸ – ಯಕ್ಷ ಹಾಸ್ಯ


ಬೆಳ್ಳಾರೆಯಲ್ಲಿ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 35 ನೇ ವರ್ಷದ ಶ್ರೀ ಶಾರದೋತ್ಸವವು ಬೆಳ್ಳಾರೆ ಅಚಲಾಪುರ ಕಟ್ಟೆಯ ಬಳಿ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಶಾರದಾ ಪ್ರತಿಷ್ಠೆ , ಪೂಜೆ ನಡೆಯಿತು.


ಬಳಿಕ ವಿದ್ಯಾರಂಭ,ಶಾರದಾ ಸಹಸ್ರನಾಮಾರ್ಚನೆ,ಅಷ್ಟೋತ್ತರನಾಮಾರ್ಚನೆ,ಆಯುಧ ಪೂಜೆ ನಡೆಯಿತು. ಭಜನಾ ಕಾರ್ಯಕ್ರಮ,ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.


ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಕವಿರತ್ನ ಕಾಳಿದಾಸ ಯಕ್ಷಹಾಸ್ಯ ನೋಡುಗರನ್ನು ಮನರಂಜಿಸಿತ್ತು. ನಂತರ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ಬೆಳ್ಳಾರೆ ಮುಖ್ಯರಸ್ತೆಯಲ್ಲಿ ನಡೆದು ಜಲಸ್ತಂಭನ ಮಾಡಲಾಯಿತು.


ಈ ಸಂದರ್ಭದಲ್ಲಿ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಉಪಾಧ್ಯಕ್ಷರಾದ ವಿಠಲ ರೈ ಪುಡ್ಕಜೆ, ವಾಸುದೇವ ಆಚಾರ್ಯ ಕಿಲಂಗೋಡಿ, ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಕೋಶಾಧಿಕಾರಿ ಮೋನಪ್ಪ ತಂಬಿನಮಕ್ಕಿ,ಜತೆಕಾರ್ಯದರ್ಶಿ ಪ್ರಸಾದ್ ಸೇವಿತ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here