ಮುಕ್ಕೂರು : ವಿಜೃಂಭಣೆಯಿಂದ ನಡೆದ ಶ್ರೀ ಶಾರದೋತ್ಸವ

0

ವೈಭವದ ಶೋಭಾಯಾತ್ರೆ ,ಮೆರುಗು ನೀಡಿದ ಕುಣಿತ ಭಜನೆ

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮುಕ್ಕೂರು ಪೆರುವಾಜೆ ವತಿಯಿಂದ ಏಳನೇ ವರ್ಷದ ಶ್ರೀ ಶಾರದೋತ್ಸವವು ಅ.5 ರಂದು ಮುಕ್ಕೂರು ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.

 

ಬೆಳಿಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ಗಂಟೆ 9.30 ರಿಂದ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಂಟೆ 10.00 ರಿಂದ ವಿದ್ಯಾರಂಭ ( ಅಕ್ಷರಾಭ್ಯಾಸ) ಮಹಾಪೂಜೆ,ವಾಹನ ಪೂಜೆ ಇತ್ಯಾದಿ ಸೇವೆಗಳು ನಡೆಯಿತು. ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.


ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆದು ಶ್ರೀ ಜಲದುರ್ಗಾ ಮಕ್ಕಳ ಕುಣಿತ ಭಜನಾ ತಂಡ ಪೆರುವಾಜೆ ಇವರ ಕುಣಿತ ಭಜನೆಯೊಂದಿಗೆ ಮುಕ್ಕೂರು ವಠಾರದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಕುಂಡಡ್ಕ ಗೌರಿಹೊಳೆಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಕಾರ್ಯದರ್ಶಿ ಸುದೀಪ್ ಕುಮಾರ್ ಕೊಂಡೆಪ್ಪಾಡಿ ಹಾಗೂ ಸಮಿತಿ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.