ಇಂದು ಸಂಪಾಜೆಯಲ್ಲಿ 10 ಲಕ್ಷದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

0

 

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ ದರ್ಕಾಸ್ ವಾರ್ಡ್ ನಲ್ಲಿ 10 ಲಕ್ಷ ರೂಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಅ.7 ರಂದು ಅಪರಾಹ್ನ 3 ಗಂಟೆಗೆ ನಡೆಯಲಿದೆ.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರ 3 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಸಂಪಾಜೆ ಗ್ರಾಮದ ದರ್ಕಾಸ್ ಅಂಗನವಾಡಿ ಹಾಗೂ ಅರೋಗ್ಯ ಸಹಾಯಕಿ ಕೇಂದ್ರದ ಆವರಣ ಗೋಡೆ ಕಾಮಗಾರಿಯ ಉದ್ಘಾಟನೆ, ಗ್ರಾಮ ಪಂಚಾಯತ್ ಅನುದಾನದಲ್ಲಿ 4 ಲಕ್ಷ ವೆಚ್ಚದಲ್ಲಿ ಸಂಪಾಜೆ ಗ್ರಾಮದ ಕೊಪ್ಪತಕಜೆ ರಸ್ತೆ ಕಾಂಕ್ರಿಟೀಕರಣ, ಉದ್ಯೋಗ ಖಾತರಿ ಯೋಜನೆಯಲ್ಲಿ ಎರಡು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಪಾಜೆ ಗ್ರಾಮದ ಗೂನಡ್ಕ ಕೊರಂಬಡ್ಕ ರಸ್ತೆ ಕಾಂಕ್ರಿಟೀಕರಣ, ಒಂದು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಪಾಜೆ ಗ್ರಾಮದ ದರ್ಕಾಸ್ ಕಾಂಕ್ರಿಟ್ ಚರಂಡಿ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ.

ಗ್ರಾಮದ ದರ್ಖಾಸ್ತ್ ವಾರ್ಡ್‌ನಲ್ಲಿ ಮಾತ್ರ 10 ಲಕ್ಷದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅನುದಾನ ಒದಗಿಸಿದ ವಿಧಾನ ಪರಿಷತ್ ಬಿ.ಎಂ.ಫಾರೂಕ್, ಅನುದಾನ ಒದಗಿಸಲು ಸಹಕಾರ ನೀಡಿದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಹಾಗು ಅಭಿವೃದ್ಧಿಗೆ ಸಹಕಾರ ನೀಡಿದ ಸ್ಥಳೀಯ ಸದಸ್ಯರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹಾಗು ರಸ್ತೆ ಅಗಲೀಕರಣಕ್ಕೆ ಸ್ಥಳ ನೀಡಿ ಸಹಕರಿಸಿದ ಬಂಗೇರ ಇಂಡಸ್ಟ್ರೀಸ್‌ನ ಅಬೂಬಕ್ಕರ್, ದುಬೈ ಖಾದರ್ ಹಾಗು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here