ಮೊಗರ್ಪಣೆ ನೂರುಲ್ ಇಸ್ಲಾಮ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

0

 

ಸುಳ್ಯ ಮೊಗರ್ಪಣೆ ಹೆಚ್ ಐ ಜೆ ಕಮಿಟಿ ಆಶ್ರಯದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನೂರುಲ್ ಇಸ್ಲಾಮ್ ಮದರಸ ವಿದ್ಯಾರ್ಥಿಗಳ ಮಿಲಾದ್ ಫೆಸ್ಟ್ ಗೆ ಇಂದು ಚಾಲನೆ ನೀಡಲಾಯಿತು.

ಮೊಗರ್ಪಣೆ ಮಾಂಬಿಲಿ ದರ್ಗಾ ದಲ್ಲಿ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷತೆಯನ್ನು ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ವಹಿಸಿದ್ದರು.
ಸ್ಥಳೀಯ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಜಮಾಅತ್ ಕಮಿಟಿ ಉಪಾಧ್ಯಕ್ಷರುಗಳಾದ ಸಿ ಎಂ ಉಸ್ಮಾನ್, ಹಾಜಿ ಎಚ್ ಎ ಉಮ್ಮರ್, ಪ್ರ. ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕಾರ್ಯಧರ್ಶಿ ಎಸ್ ವೈ ಅಬ್ದುಲ್ ರಹಿಮಾನ್, ದಫ್ ಸಮಿತಿ ಅಧ್ಯಕ್ಷ ಇಬ್ರಾಹಿಂ ಡಿ,ಕೋಶಾಧಿಕಾರಿ ಮಹಮ್ಮದ್ ಆದರ್ಶ, ಸ್ಪರ್ಧಾ ಕಾರ್ಯಕ್ರಮದ ನಿರ್ಣಾಯಕರುಗಳಾದ ಅಬೂಬಕ್ಕರ್ ಮುಸ್ಲಿಯಾರ್ ಬದ್ಯಡ್ಕ,ಉವೈಸ್ ಮಾಸ್ಟರ್ ಅನ್ಸಾರಿಯ,ನೂರುಲ್ ಇಸ್ಲಾಮ್ ಮದರಸ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಮದರಸ ಸದರ್ ಮುಅಲ್ಲಿಮ್ ಸಭಾ ಕಾರ್ಯಕ್ರಮ ನಿರೂಪಿಸಿ, ಮಿಲಾದ್ ಸ್ವಾಗತ ಸಮಿತಿ ಸಂಚಾಲಕ ಉಸ್ಮಾನ್ ಜಯನಗರ ಸ್ವಾಗತಿಸಿದರು.
ಸ್ಪರ್ಧಾ ಕಾರ್ಯಕ್ರಮವನ್ನು ಜಯನಗರ ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಮ್ ಸಕಾಫಿ ನಿರೂಪಿಸಿದರು.
ಒಟ್ಟು 210 ಹೆಚ್ಚು ವಿದ್ಯಾರ್ಥಿಗಳು 150ಕ್ಕೂ ಹೆಚ್ಚು ಸ್ಪರ್ಧಾ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here