ಸುಳ್ಯ ದಸರಾ ಉತ್ಸವದಲ್ಲಿ ರಂಜಿಸಿದ ಯಕ್ಷ ಗಾನ ನಾಟ್ಯ ಹಾಸ್ಯ ವೈಭವ

0

 

 

ಸುಳ್ಯದ ದಸರಾ ಉತ್ಸವದಲ್ಲಿ ಹನುಮಗಿರಿ ಮೇಳದ ಭಾಗವತರಾದ ರವಿಚಂದ್ರ ಕನ್ನಡಿ ಕಟ್ಟೆಯವರ ಸಾರಥ್ಯದಲ್ಲಿ ಯಕ್ಷ ಗಾನ ನಾಟ್ಯ ಹಾಸ್ಯ ವೈಭವ ಎಂಬ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮವು ಅ.8 ರಂದು ರಾತ್ರಿ ಪ್ರದರ್ಶನಗೊಂಡಿತು.


ಸಹ ಭಾಗವತರಾಗಿ ಕಾವ್ಯಶ್ರೀ ಅಜೇರು, ಚೆಂಡೆ ವಾದನದಲ್ಲಿ ರೋಹಿತ್ ಉಚ್ಚಿಲ, ಮದ್ದಲೆ ವಾದಕರಾಗಿ ಶ್ರೀಧರ ವಿಟ್ಲ, ಚಕ್ರ ತಾಳದಲ್ಲಿ ಮುರಾರಿ, ಪಾತ್ರ ವರ್ಗದಲ್ಲಿ ಶಾಮ ಭಾಮ ರಾಗಿ ರಕ್ಷಿತ್ ಪಡ್ರೆ,‌ಅಕ್ಷಯ್ ಮಾರ್ನಾಡ್, ಹಾಸ್ಯ ‌ಕಲಾವಿದರಾಗಿ ದಿನೇಶ್ ಕೋಡಪದವು, ಸುಂದರ ಬಂಗಾಡಿ,‌ಸುರೇಶ್ ಬಂಗಾಡಿ ಅಭಿನಯಿಸಿದರು. ಲಕ್ಷ್ಮೀ ‌ಮಚ್ಚಿನ ನಿರೂಪಿಸಿದರು.