ಕಲ್ಲುಗುಂಡಿ ಜುಮ್ಹಮಸೀದಿಯಲ್ಲಿ ಹಯಾತುಲ್ ಇಸ್ಲಾಂ ಮದರಸ ಕಲ್ಲುಗುಂಡಿ ದೊಡ್ಡಡ್ಕ ಚಟ್ಟೆಕಲ್ಲು ಈದ್ ಮಿಲಾದ್ ಪ್ರಯುಕ್ತ ವಿದ್ಯಾರ್ಥಿ ಮೀಲಾದ್ ಪೆಸ್ಟ್ ಕಾರ್ಯಕ್ರಮಕ್ಕೆ ಅ. 8ರಂದು ಹಯಾತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಕಲ್ಲುಗುಂಡಿ ಮುಹಿಯಧ್ಧೀನ್ ಜುಮ್ಹಮಸೀದಿಯ ಖತೀಬರಾದ ಅಹ್ಮದ್ ನಹೀಂ ಫೈಝಿ ಧುವಾದೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮ್ಹಾತಿನ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸಂಟ್ಯಾರ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಜಿ. ಕೆ ಹಮೀದ್, ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ರಾದ ಎ.ಕೆ. ಇಬ್ರಾಹಿಂ, ಸಂಪಾಜೆ ಜಮ್ಹಾತಿನ ಅಧ್ಯಕ್ಷ ರಾದ ತಾಜ್ ಮಹಮ್ಮದ್, ಜಮ್ಹಾತಿನ ಪ್ರಧಾನ ಕಾರ್ಯದರ್ಶಿ ರಝಾಕ್, ಸೂಪರ್ ಹಾಜಿ ಬಿ ಹಸೈನಾರ್ ಮದರಸ ಅಧ್ಯಾಪಕರುಗಳಾದ ಇಬ್ರಾಹಿಂ ಉಸ್ತಾದ್ ಝಕರಿಯಾ ಉಸ್ತಾದರು ಹಾಜರಿದ್ದು ಸದರ್ ಉಸ್ತಾದ್ ಅಬ್ದುಲ್ ನಾಸರ್ ಫೈಝಿ ಸ್ವಾಗತಿಸಿ ವಂದಿಸಿದರು. ಯಸ್ ಕೆ ಐ ಯಂ ವಿ ಬಿ ಮದರಸ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.