ಬೆಳ್ಳಾರೆ; ದಾರುಲ್ ಹುದಾ ಇಸ್ಲಾಮಿಕ್ ಸೆಂಟರ್ ಹಾಗೂ ತಂಬಿನಮಕ್ಕಿ ಜಮಾಅತ್ ವತಿಯಿಂದ ಬ್ರಹತ್ ಮೀಲಾದ್ ಜಾಥಾ ಇಂದು ನಡೆಯಿತು. ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ಸಾಗಿ ಬಂದ ಜಾಥಾವನ್ನು ಬೆಳ್ಳಾರೆ ಮಸೀದಿ ಬಳಿ ಸ್ವಾಗತಿಸಲಾಯಿತು. ನಂತರ ಬೆಳ್ಳಾರೆ ದರ್ಗಾ ಝಿಯಾರತ್ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಲವು ದಫ್ ತಂಡಗಳು, ಉಲಮಾಗಳು,ಮುತಅಲ್ಲಿಮರು, ವಿದ್ಯಾರ್ಥಿಗಳು, ಜಮಾಅತರು ಉಪಸ್ಥಿತರಿದ್ದರು.